ನವದೆಹಲಿ: ದೆಹಲಿ ಮೆಟ್ರೋದಲ್ಲಿ ಇಬ್ಬರು ಹುಡುಗಿಯರು ‘ಹೋಳಿ’ ಆಡುತ್ತಾ ರೊಮ್ಯಾನ್ಸ್ ಮಾಡಿದ ವಿಡಿಯೋ ಭಾರಿ ವೈರಲ್ ಆಗಿತ್ತು, ಅಲ್ಲದೇ ಭಾರಿ ವಿವಾದಗಳಿಗೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರೂ ಮಹಿಳೆಯರ ವಿರುದ್ಧ ಐಪಿಸಿ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಮತ್ತು ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆಯ ಸೆಕ್ಷನ್ 59 ರ ಅಡಿಯಲ್ಲಿ ಏಪ್ರಿಲ್ 8 ರಂದು ನೇತಾಜಿ ಸುಭಾಷ್ ಪ್ಲೇಸ್ ಮೆಟ್ರೋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರಂಭದಲ್ಲಿ ವೀಡಿಯೊ ವೈರಲ್ ಆದಾಗ, ಇದು ‘ಡೀಪ್ ಫೇಕ್’ ಆಗಿರಬಹುದು ಎಂಬ ಊಹಾಪೋಹಗಳು ಇದ್ದವು, ಆದರೆ ನಂತರ ಮಹಿಳೆಯರು ಇದನ್ನು ಮೆಟ್ರೋ ಒಳಗೆ ಚಿತ್ರೀಕರಿಸಲಾಗಿದೆ ಎಂದು ಒಪ್ಪಿಕೊಂಡರು, ಇದು ದೆಹಲಿ ಮೆಟ್ರೋ ರೈಲು ನಿಗಮದ ನಿಯಮಗಳ ಉಲ್ಲಂಘನೆಯಾಗಿದೆ.ರೀಲ್ಸ್ ಮಾಡುತ್ತಿದ್ದ ಗ್ರೇಟರ್ ನೋಯ್ಡಾದ ಇಬ್ಬರು ಮಹಿಳೆಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನಂತರ ಕೆಲವು ಷರತ್ತುಗಳೊಂದಿಗೆ ಪೊಲೀಸ್ ಠಾಣೆಯಿಂದಲೇ ಜಾಮೀನು ಪಡೆದಿದ್ದಾರೆ.
This Holi video in Delhi Metro is not a fake or deepfake video
Here is the high resolution video and the original link : https://t.co/eNlySWOuUm#DelhiMetro pic.twitter.com/O5duB0lUQc
— Pooja Sangwan Hooda 🇮🇳 (@ThePerilousGirl) March 24, 2024

