HomeKarnatakaBIG NEWS: ಅಪ್ಪ ದುಡಿದ ಹಣ ಕೇಳಿದ್ದಕ್ಕೆ ಮಗಳ ಮೇಲೆ ಕಂಪನಿ ಮಾಲೀಕನಿಂದ ಥಳಿತ; ಬಾಲಕಿ...

BIG NEWS: ಅಪ್ಪ ದುಡಿದ ಹಣ ಕೇಳಿದ್ದಕ್ಕೆ ಮಗಳ ಮೇಲೆ ಕಂಪನಿ ಮಾಲೀಕನಿಂದ ಥಳಿತ; ಬಾಲಕಿ ಸ್ಥಿತಿ ಗಂಭೀರ

ಬೆಳಗಾವಿ: ಅಪ್ಪ ಕೆಲಸ ಮಾಡಿದ ಹಣವನ್ನು ಮಗಳು ಕೇಳಿದ್ದಕ್ಕೆ ಆಲ್ಕೆಯ ಮೇಲೆ ಕಂಪನಿ ಮಾಲೀಕ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಕತಿ ಗ್ರಾಮದಲ್ಲಿ ನಡೆದಿದೆ.

ಜೈ ಹನುಮಾನ್ ಬ್ಯಾಂಡ್ ಕಂಪನಿಯಲ್ಲಿ ಬಾಲಕಿಯ ತಂದೆ ಅರ್ಜುನ್ ಕೆಲಸ ಮಾಡುತ್ತಿದ್ದರು. ಯುಗಾದಿ ಹಬ್ಬದ ಸಂದರ್ಭದಲ್ಲಿ ಅಪ್ಪ ದುಡಿದ ಹಣವನ್ನು ಕೇಳಲು ಮಗಳು ಹೋಗಿದ್ದಾಳೆ. ಈ ವೇಳೆ ಆಕೆಯ ಮೇಲೆ ಕಂಪನಿ ಮಾಲೀಕ ಅಶೋಕ್ ಹಾಗೂ ಕರೆಪ್ಪ ಭಜಂತ್ರಿ ಎಂಬುವವರು ಹಲ್ಲೆ ನಡೆಸಿ, ಮನಬಂದಂತೆ ಥಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಪೋಷಕರು ದೂರು ದಾಖಲಿಸಲು ಹೋದರೆ ಕಾಕತಿ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ನೊಂದ ಬಾಲಕಿ ತಂದೆ-ತಾಯಿಗಳು ಬೆಳಗಾವಿ ಕಮಿಷ್ನರ್ ಗೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular