HomeEntertainmentಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ 'ರಕ್ತಾಕ್ಷ' ಚಿತ್ರತಂಡ

ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ ‘ರಕ್ತಾಕ್ಷ’ ಚಿತ್ರತಂಡ

ವಾಸುದೇವ ನಿರ್ದೇಶನದ ರೋಹಿತ್ ಅಭಿನಯದ ಬಹುನಿರೀಕ್ಷಿತ ‘ರಕ್ತಾಕ್ಷ’ ಚಿತ್ರ ಈಗಾಗಲೇಟೀಸರ್ ಮತ್ತು ಹಾಡಿನ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಇಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಸಾಯಿಪ್ರೊಡಕ್ಷನ್ ಬ್ಯಾನರ್ ನಲ್ಲಿ ನಟ ರೋಹಿತ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರೋಹಿತ್ ಸೇರಿದಂತೆ ಪ್ರಮೋದ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರೂಪ ರಾಯಪ್ಪ, ಗುರುದೇವ ನಾಗರಾಜ್, ಬಸವರಾಜ ಆದಾಪುರ, ರಚನಾ ದಶರತ್, ವಿಲಾಸ್ ಕುಲಕರ್ಣಿ ಬಣ್ಣ ಹಚ್ಚಿದ್ದಾರೆ. ಸತೀಶ್ ಚಂದ್ರಯ್ಯ ಸಂಕಲನ. ಆದರ್ಶ್ ಛಾಯಗ್ರಹಣವಿದೆ. ಧೀರೇಂದ್ರ ಡಾಸ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular