HomeIndiaಚಪ್ಪಲಿ ಹಾರ ಹಾಕಿಕೊಂಡು ಅಭ್ಯರ್ಥಿ ಪ್ರಚಾರ: ವಿಡಿಯೋ ವೈರಲ್

ಚಪ್ಪಲಿ ಹಾರ ಹಾಕಿಕೊಂಡು ಅಭ್ಯರ್ಥಿ ಪ್ರಚಾರ: ವಿಡಿಯೋ ವೈರಲ್

ಉತ್ತರ ಪ್ರದೇಶದ ಅಲಿಘರ್‌ನ ಸ್ವತಂತ್ರ ಅಭ್ಯರ್ಥಿ ಪಂಡಿತ್ ಕೇಶವ್ ದೇವ್ ಅವರಿಗೆ ಚುನಾವಣಾ ಆಯೋಗ ಚಪ್ಪಲಿ ಗುರುತು ನೀಡಿದೆ.

ತನಗೆ ನೀಡಿದ ಚುನಾವಣಾ ಚಿಹ್ನೆ ಚಪ್ಪಲಿಯನ್ನೇ ಹಾರ ಮಾಡಿಕೊಂಡು ಕೇಶವ್ ಪ್ರಚಾರ ಕೈಗೊಂಡಿದ್ದಾರೆ.

ಚುನಾವಣಾ ಆಯೋಗ ಚಪ್ಪಲಿ ಗುರುತು ನೀಡಿದ ಹಿನ್ನಲೆಯಲ್ಲಿ ಅದನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡ ಅವರು ಚಪ್ಪಲಿಗಳಿಂದ ಮಾಡಿದ ಹಾರ ಹಾಕಿಕೊಂಡು ಮತದಾರರನ್ನು ಸೆಳೆಯುತ್ತಿದ್ದಾರೆ. ತಮಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಜನರನ್ನು ಸೆಳೆಯುವ ಗುರಿಯನ್ನು ಹೊಂದಿರುವ ದೇವ್ ಅವರು ತಮ್ಮ ಪ್ರಚಾರದ ಸಮಯದಲ್ಲಿ ತಮ್ಮ ಕುತ್ತಿಗೆಗೆ 7 ಚಪ್ಪಲಿಗಳ ಹಾರವನ್ನು ಹಾಕಿಕೊಂಡಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲಿಗಢ ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ ಗೌತಮ್ ಅವರು ಅಲಿಗಢದಿಂದ 656215 ಮತಗಳನ್ನು ಗಳಿಸಿದರು. 426954 ಮತಗಳನ್ನು ಪಡೆದ ಬಿಎಸ್ಪಿ ಡಾ.ಅಜೀತ್ ಬಲಿಯಾನ್ ಅವರನ್ನು ಬಿಜೆಪಿ ಸೋಲಿಸಿತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular