ಬೆಂಗಳೂರು: ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಬಿಗ್ ಬಾಸ್’ ಸ್ಪರ್ಧಿ ಸೋನು ಶ್ರೀನಿವಾಸ ಗೌಡರಿಗೆ ಜಾಮೀನು ದೊರೆತಿದೆ.
ಸೋನು ಶ್ರೀನಿವಾಸ ಗೌಡಗೆ ಜಾಮೀನು ಮಂಜೂರು ಮಾಡಿ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ. ಇಂದು ಅಥವಾ ನಾಳೆ ಜೈಲಿನಿಂದ ಸೋನು ಶ್ರೀನಿವಾಸಗೌಡ ಬಿಡುಗಡೆಯಾಗುವ ಸಾಧ್ಯತೆ ಇದೆ.