HomeKarnatakaBIG NEWS: ಜಮೀನು ವಿಚಾರವಾಗಿ ತಮ್ಮನನ್ನೇ ಹತ್ಯೆಗೈದ ಅಣ್ಣಂದಿರು ಅರೆಸ್ಟ್

BIG NEWS: ಜಮೀನು ವಿಚಾರವಾಗಿ ತಮ್ಮನನ್ನೇ ಹತ್ಯೆಗೈದ ಅಣ್ಣಂದಿರು ಅರೆಸ್ಟ್

ರಾಯಚೂರು: ಜಮೀನು ವಿಚಾರವಾಗಿ ತಮ್ಮನನ್ನೇ ಹತ್ಯೆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಣ್ಣಂದಿರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಜೀನೂರು ಗ್ರಾಮದಲ್ಲಿ ಎರಡು ದಿನಗಳ ಹಿಂದಷ್ಟೇ ರಾಮಣ್ಣ ಎಂಬಾತನನ್ನು ಹೊಲದಲ್ಲಿ ದೊಣ್ಣೆಯಿಂದ ಮನಸೋ ಇಚ್ಛೆ ಹೊಡೆದು ಸಾಯಿಸಿದ್ದರು. ಜಮೀನು ವಿಚಾರವಾಗಿ ಅಣ್ಣಂದಿರು ಹಾಗೂ ಅವರ ಮಕ್ಕಳು ತಮ್ಮನನ್ನು ಹತ್ಯೆಗೈದಿದ್ದ ಆರೋಪ ಕೇಳಿಬಂದಿತ್ತು.

ಮೃತ ರಾಮಣ್ಣನ ಅಣ್ಣಂದಿರಾದ ಮೂಕಯ್ಯ ಸೇರಿದಂತೆ 8 ಜನರ ವಿರುದ್ಧ ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಆರೋಪಿ ಅಣ್ಣಂದಿರಾದ ಮೂಕಯ್ಯ, ನಿಂಗಪ್ಪ, ಮೂಕಯ್ಯನ ಪತ್ನಿ ನೀಲಮ್ಮ, ನಿಂಗಪ್ಪನ ಪತ್ನಿ ಲಕ್ಷ್ಮೀ, ಹಾಗೂ ಮಕ್ಕಳು ಸೇರಿ ಐವರನ್ನು ಬಂಧಿಸಿದ್ದಾರೆ. ಎರಡು ಎಕರೆ ಹತ್ತು ಗುಂಟೆ ಜಾಗದ ವಿಚಾರವಾಗಿ ಗಲಾಟೆ ನಡೆದು ಸಹೋದರರೇ ತಮ್ಮನನ್ನು ಹಯೆ ಮಾಡಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular