ನುಹ್ ಹಿಂಸಾಚಾರ ಪ್ರಕರಣದ ಆರೋಪಿ ರಾಜ್ ಕುಜ್ಮಾರ್ ಅಲಿಯಾಸ್ ಬಿಟ್ಟು ಭಜರಂಗಿ ಒಬ್ಬ ವ್ಯಕ್ತಿಯನ್ನು ಕೋಲಿನಿಂದ ಹೊಡೆಯುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಈಗಾಗಲೇ ಹಲವಾರು ಎಫ್ಐಆರ್ ಗಳನ್ನು ಎದುರಿಸುತ್ತಿರುವ ಗೋರಕ್ಷಕ ಬಿಟ್ಟು ಭಜರಂಗಿ ಪ್ರಸ್ತುತ ಹರಿಯಾಣದ ನುಹ್ ಹಿಂಸಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ ಬಿಟ್ಟು ಪೊಲೀಸರ ಸಮ್ಮುಖದಲ್ಲಿ ವ್ಯಕ್ತಿಯೊಬ್ಬನನ್ನು ಹೊಡೆಯುವುದನ್ನು ನೋಡಬಹುದಾಗಿದೆ. ವೀಡಿಯೊದಲ್ಲಿ ಪೊಲೀಸರು ಹಲ್ಲೆಯನ್ನು ತಡೆಯಲು ಪ್ರಯತ್ನಿಸುವುದಿಲ್ಲ. ಈ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಮಾಧ್ಯಮ ವರದಿಗಳ ಪ್ರಕಾರ, ಘಟನೆಯ ವೀಡಿಯೊ ವೈರಲ್ ಆದ ನಂತರವೂ, ಅಂತರ್ಜಾಲದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ ನಂತರವೂ, ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಲ್ಲ.ವರದಿಗಳ ಪ್ರಕಾರ, ಏಪ್ರಿಲ್ 1 ರಂದು ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿ ಫರಿದಾಬಾದ್ನ ಸರೂರ್ಪುರಕ್ಕೆ ಸೇರಿದವನು.
Cow viglante @bittubajrangi34 #bittubajrangi in controversy yet again as he thrashes a youth in presence of a cop. The youth according to him was luring two young girls into his room with malicious intentions. Bajrangi's gang brought him to Bajrangi to teach a 'Lesson'.… pic.twitter.com/yfplmzkhdG
— Sumedha Sharma (@sumedhasharma86) April 2, 2024

