HomeKarnatakaBIG NEWS: ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಜಿ.ಟಿ.ದೇವೇಗೌಡ ತಿರುಗೇಟು

BIG NEWS: ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಜಿ.ಟಿ.ದೇವೇಗೌಡ ತಿರುಗೇಟು

ಮೈಸೂರು: ಮೂರು ಬಾರಿ ಗೆದ್ದ ಜಿಟಿಡಿ ಏನು ಕಡೆದು ಕಟ್ಟೆ ಹಾಕಿದ್ದಾನೆ? ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ಏನು ಮಾಡಿದ್ದಾರೆ? ಎಂದು ಕೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಿ.ಟಿ.ದೇವೇಗೌಡ, ನೀವೇನು ಮಾಡಿದ್ದೀರಿ? ನಾನು ಎಷ್ಟು ಕಟ್ಟೆ ಕಟ್ಟಿದ್ದೇನೆ ಎಂದು ತೋರಿಸುತ್ತೇನೆ. ಇವರು ಎಷ್ಟು ಕಟ್ಟೆ ಕಟ್ಟಿದ್ದಾರೆ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ಎಷ್ಟು ದಿನ ನೀವು ಮುಖ್ಯಮಂತ್ರಿಯಾಗಿರುತ್ತೀರಾ? ನಿಮ್ಮ ಬಗ್ಗೆ ನಾನು ಗೌರವ ಇಟ್ಟುಕೊಂಡು ಬಂದಿದ್ದೇನೆ. ಮುಖ್ಯಮಂತ್ರಿಯಾಗಿ ತವರು ಜಿಲ್ಲೆಯಲ್ಲಿ ಎಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಿ? ಕ್ಷೇತ್ರದ ಜನರು ಕುಡಿಯುವ ನೀರಿಗೂ ಸಂಕಷ್ಟಪಡುತ್ತಿದ್ದಾಗ ನೀರಿಗೆ ವ್ಯವಸ್ಥೆ ಮಾಡಿದ್ದು ನಾವು. ಜನರಿಗೆ ಲೈಟ್ ಕೂಡ ಇರಲಿಲ್ಲ. ಅಭಿವೃದ್ಧಿ ಮಾತನಾಡುವ ಇವರು ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಯ್ತು ಇವರು ಬಹಳ ಅಭಿವೃದ್ದಿ ಮಾಡಿದ್ದಾರಲ್ಲ ಹಾಗಾದರೆ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಲ್ಲಿ ಗೆದ್ದು ತೋರಿಸಲಿ. ನಾವೇನು ಅಭಿವೃದ್ಧಿ ಮಾಡಿಲ್ಲ. ತಾವು ಮಾಡಿರುವ ಅಭಿವೃದ್ಧಿ ಏನೆಂಬುದನ್ನಾದರೂ ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular