HomeKarnatakaಹಿಂಡಲಗಾ ಜೈಲಿನ ಮೇಲೆ ದಾಳಿ ಪ್ರಕರಣ; ಮೊಬೈಲ್ ಚಾರ್ಜರ್, ಬ್ಲೂಟೂತ್ ಡಿವೈಸ್ ಸೇರಿ ಹಲವು ವಸ್ತುಗಳು...

ಹಿಂಡಲಗಾ ಜೈಲಿನ ಮೇಲೆ ದಾಳಿ ಪ್ರಕರಣ; ಮೊಬೈಲ್ ಚಾರ್ಜರ್, ಬ್ಲೂಟೂತ್ ಡಿವೈಸ್ ಸೇರಿ ಹಲವು ವಸ್ತುಗಳು ವಶಕ್ಕೆ

ಬೆಳಗಾವಿ: ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಪಿ ರೋಹನ್ ಜಗದೀಶ್, 146 ಪೊಲೀಸ್ ಸಿಬ್ಬಂದಿ ಶ್ವಾನ ದಳದೊಂದಿಗೆ ಜೈಲಿನ ಮೇಲೆ ದಾಳಿ ನಡೆಸಿ, ಇಡೀ ಜೈಲು ತಪಾಸಣೆ ನಡೆಸಿದೆ. ಜೈಲಿನ ವಾಸ್ತವತೆ ತಿಳಿಯುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ದಾಳಿ ವೇಳೆ ತಂಬಾಕು, ಬೀಡಿ, ಸಿಗರೇಟು, ಸಣ್ಣಪುಟ್ಟ ಚಾಕುಗಳು ಸಿಕ್ಕಿವೆ. ಸದ್ಯಕ್ಕೆ ಯಾವುದೇ ಮೊಬೈಲ್ ಸಿಕ್ಕಿಲ್ಲ. ಆದರೆ ಮೊಬೈಲ್ ಚಾರ್ಜರ್, ಬ್ಲೂಟೂತ್ ಡಿವೈಸ್ ಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೈಲಿನಲ್ಲಿ ಭದ್ರತೆ ಇದ್ದರೂ ಇಂತಹ ವಸ್ತುಗಳು ಹೇಗೆ ಜೈಲಿಗೆ ಹೋಗುತ್ತಿವೆ ಎಂಬುದನ್ನು ತನಿಖೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಪೊಲೀಸರು ಹಿಂಡಲಗಾ ಜೈಲಿನಲ್ಲಿ ತಪಾಸಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular