ಬೆಂಗಳೂರು : ಪೊಲೀಸ್ ಠಾಣೆಗೆ ನುಗ್ಗಿ ಎಎಸ್ಐ ಒಬ್ಬರಿಗೆ ಮಹಿಳೆ ಬಾಟಲಿಯಿಂದ ಇರಿದ ಘಟನೆ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಹಲ್ಲೆ ನಡೆಸಿದ ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದು, ಆಕೆಯನ್ನು ನಿಮ್ಹಾನ್ಸ್ ಗೆ ದಾಖಲಿಸಲಾಗಿದೆ. ಗಂಗಮ್ಮನ ಗುಡಿ ಎಎಸ್ಐ ನಾಗರಾಜ್ಗೆ ಅಶ್ವಿನಿ ಅವರಿಗೆ ಬಾಟಲ್ನಿಂದ ಇರಿದಿದ್ದಾಳೆ. ಘಟನೆಯಲ್ಲಿ ಎಎಸ್ಐ ಅವರ ಬಲಭಾಗದ ಕೈಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಜಾಗದ ವಿಚಾರದಲ್ಲಿ ತನಗೆ ಅನ್ಯಾಯವಾಗಿದೆ ಎಂದು ನೊಂದ ಮಹಿಳೆ ಠಾಣೆ ಒಳಗಡೆ ಹೋಗಿ ಮಹಿಳೆ ಬಾಟಲ್ನಿಂದ ಚುಚ್ಚಿದ್ದಾಳೆ. ಘಟನೆ ಸಂಬಂಧ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
.