HomeKarnatakaಅಸಲಿ ನೋಟಿನ ಜತೆ ಕಲರ್ ಜೆರಾಕ್ಸ್ ನೋಟ್ ನೀಡಿದ ವಂಚಕ ಅರೆಸ್ಟ್

ಅಸಲಿ ನೋಟಿನ ಜತೆ ಕಲರ್ ಜೆರಾಕ್ಸ್ ನೋಟ್ ನೀಡಿದ ವಂಚಕ ಅರೆಸ್ಟ್

ಶಿವಮೊಗ್ಗ: ಪಡೆದುಕೊಂಡ ಸಾಲ ವಾಪಸ್ ಕೊಡುವಾಗ ಅಸಲಿ ನೋಟುಗಳೊಂದಿಗೆ ಕಲರ್ ಜೆರಾಕ್ಸ್ ನೋಟುಗಳನ್ನು ನೀಡಿ ವಂಚಿಸಿದ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆ ಸಾಗರ ನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.

ಸಾಗರ ಸಮೀಪದ ಚಿಪ್ಳಿ ಗ್ರಾಮದ ಪಾನಿಪುರಿ ಮಾರಾಟಗಾರ ಸಂತೋಷ್ ಬಂಧಿತ ವ್ಯಕ್ತಿ. ಸಾಗರದ ಶಿವಪ್ಪನಾಯಕ ಬಡಾವಣೆಯ ಮನೋಜ್ ಅವರಿಂದ 30,000 ರೂ.ಸಾಲ ಪಡೆದುಕೊಂಡಿದ್ದ ಸಂತೋಷ್ ಸಾಲ ಮರುಪಾವತಿಸುವ ಸಂದರ್ಭದಲ್ಲಿ ಅಸಲಿ ನೋಟುಗಳೊಂದಿಗೆ ಕಲರ್ ಜೆರಾಕ್ಸ್ ಮಾಡಿದ 500 ರೂಪಾಯಿ ಮುಖಬೆಲೆಯ ಕೆಲವು ನೋಟುಗಳನ್ನು ಸೇರಿಸಿ ಕೊಟ್ಟಿದ್ದಾರೆ.

ಮನೋಜ್ ಮನೆಗೆ ತೆರಳಿ ಹಣ ಪರಿಶೀಲಿಸಿದಾಗ ನಕಲಿ ನೋಟುಗಳು ಪತ್ತೆಯಾಗಿದೆ. ಮನೋಜ್ ನೀಡಿದ ದೂರಿನ ಮೇರೆಗೆ ಸಾಗರ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂತೋಷ್ ನನ್ನು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular