HomeEntertainment5 ಮಿಲಿಯನ್ ವೀಕ್ಷಣೆ ಪಡೆದ 'ಯುವ' ಚಿತ್ರದ ''ಕವಿತೆ ಕವಿತೆ'' ಹಾಡು

5 ಮಿಲಿಯನ್ ವೀಕ್ಷಣೆ ಪಡೆದ ‘ಯುವ’ ಚಿತ್ರದ ”ಕವಿತೆ ಕವಿತೆ” ಹಾಡು

ಯುವ ರಾಜ್ ಕುಮಾರ್ ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ ಬಹುನಿರೀಕ್ಷಿತ ‘ಯುವ’ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ  ತೆರೆ ಕಾಣಲಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.  ಈ ಸಿನಿಮಾದ ‘ಕವಿತೆ ಕವಿತೆ’ ಎಂಬ ಲಿರಿಕಲ್ ಹಾಡು ಸದ್ಯ youtube  ಟ್ರೆಂಡಿಂಗ್ ನಲ್ಲಿದ್ದು, ಇದೀಗ ಐದು ಮಿಲಿಯನ್ ವೀಕ್ಷಣೆ ಪಡೆದಿದೆ. ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸಂಜಿತ್ ಹೆಗಡೆ ಈ ಹಾಡಿಗೆ ಧ್ವನಿಯಾಗಿದ್ದು, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗುಂದೂರು ನಿರ್ಮಾಣ ಮಾಡಿದ್ದು, ಯುವರಾಜ್ ಕುಮಾರ್ ಗೆ ಜೋಡಿಯಾಗಿ ‘ಕಾಂತಾರ’ ನಟಿ ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಆಶಿಕ್ ಸಂಕಲನ, ಶ್ರೀಶಾ ಕುಡುವಳ್ಳಿ ಛಾಯಾಗ್ರಹಣವಿದೆ, ಅಜನೇಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular