HomeEntertainmentರವಿತೇಜ ಅಭಿನಯದ 'ವೆಂಕಿ' ಚಿತ್ರಕ್ಕೆ 20 ವರ್ಷದ ಸಂಭ್ರಮ

ರವಿತೇಜ ಅಭಿನಯದ ‘ವೆಂಕಿ’ ಚಿತ್ರಕ್ಕೆ 20 ವರ್ಷದ ಸಂಭ್ರಮ

ಮಾಸ್ ಮಹಾರಾಜ ರವಿತೇಜ ಅಭಿನಯದ ಬ್ಲಾಕ್ ಬಸ್ಟರ್ ಎಂಟರ್ಟೈನರ್ ಚಿತ್ರ ‘ವೆಂಕಿ’ ತೆರೆ ಮೇಲೆ ಬಂದು ಇಂದಿಗೆ 20 ವರ್ಷಗಳಾಗಿವೆ. ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. 2004 ಮಾರ್ಚ್ 26 ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.

ಈ ಚಿತ್ರದಲ್ಲಿ ರವಿತೇಜ ಸೇರಿದಂತೆ ಸ್ನೇಹ, ಶ್ರೀನಿವಾಸ ರೆಡ್ಡಿ, ಚಿತ್ರಂ ಸೀನು, ರಾಮಚಂದ್ರ, ಬ್ರಹ್ಮಾನಂದಂ, ವೇಣು ಮಾಧವ್, ಮಲ್ಲಿಕಾರ್ಜುನ ರಾವ್, ಕೃಷ್ಣ ಭಗವಾನ್, ಮಾಸ್ಟರ್ ಭರತ್, ಅಪೂರ್ವ  ತೆರೆ ಹಂಚಿಕೊಂಡಿದ್ದಾರೆ. ಲಕ್ಷ್ಮಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಅಟ್ಲೂರಿ ಪೂರ್ಣಚಂದ್ರ ರಾವ್  ನಿರ್ಮಾಣ ಮಾಡಿದ್ದಾರೆ. ಮಾರ್ತಾಂಡ್ ಕೆ ವೆಂಕಟೇಶ್ ಸಂಕಲನವಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular