HomeKarnatakaಗಮನಿಸಿ : ದಾಖಲೆ ಇಲ್ಲದೇ 50 ಸಾವಿರ ರೂ.ಮೇಲ್ಪಟ್ಟು ಹಣ ಕೊಂಡೊಯ್ಯುವಂತಿಲ್ಲ

ಗಮನಿಸಿ : ದಾಖಲೆ ಇಲ್ಲದೇ 50 ಸಾವಿರ ರೂ.ಮೇಲ್ಪಟ್ಟು ಹಣ ಕೊಂಡೊಯ್ಯುವಂತಿಲ್ಲ

ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, 09-ಬಳ್ಳಾರಿ (ಪ.ಪಂ) ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ರೂ.50 ಸಾವಿರ ಮೇಲ್ಪಟ್ಟು ನಗದು ಹಣವನ್ನು ಸೂಕ್ತ ದಾಖಲೆಗಳಿಲ್ಲದೇ ತೆಗೆದುಕೊಂಡು ಹೋಗಲು ಮತ್ತು ಸಾಗಾಣಿಕೆ ಮಾಡಲು ಅವಕಾಶ ಇರುವುದಿಲ್ಲ. ದಾಖಲೆಗಳಿಲ್ಲದೇ ಸಾಗಾಣಿಕೆ ಮಾಡಿದ ನಗದು ಹಣವನ್ನು ಚುನಾವಣಾ ತಂಡಗಳು ಜಪ್ತಿ ಮಾಡಿ ಸಮಿತಿಗೆ ಹಾಜರುಪಡಿಸಿ ವರದಿ ಸಲ್ಲಿಸಲಾಗುತ್ತದೆ.

ಚುನಾವಣಾ ತಂಡದಿಂದ ನಗದು ಹಣವನ್ನು ಜಪ್ತಿ ಮಾಡಿದಲ್ಲಿ, ಸಾರ್ವಜನಿಕರು ಹಣ ಬಿಡುಗಡೆಗಾಗಿ ಮೇಲ್ಮನವಿಯನ್ನು ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಕುಂದು ಕೊರತೆಗಳ ಸಮಿತಿಯನ್ನು ಸಂಪರ್ಕಿಸಬಹುದು ಎಂದು ಲೋಕಸಭೆ ಸಾರ್ವತ್ರಿಕ ಚುನಾವಣೆಯ ಜಿಲ್ಲಾ ಕುಂದು ಕೊರತೆಗಳ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ.

*ಸಮಿತಿಯ ವಿವರ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಜಿಲ್ಲಾ ಕುಂದು ಕೊರತೆಗಳ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಬಳ್ಳಾರಿ.

ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ

ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಜಿಲ್ಲಾ ಕುಂದು ಕೊರತೆಗಳ ಸಮಿತಿಯ ಸಂಚಾಲಕರು ಹಾಗೂ ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗಳಾದ ನಾಗರಾಜು ಮತ್ತು ಅವರ 8618724433 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular