HomeCrimeನಗರ್ತ ಪೇಟೆ ಬೆನ್ನಲ್ಲೇ ಬೆಂಗಳೂರಲ್ಲಿ ಮತ್ತೊಂದು ಘಟನೆ ; ಅನ್ಯಕೋಮಿನ ಯುವಕರಿಂದ ಅಂಗಡಿ ಮಾಲೀಕನ ಮೇಲೆ...

ನಗರ್ತ ಪೇಟೆ ಬೆನ್ನಲ್ಲೇ ಬೆಂಗಳೂರಲ್ಲಿ ಮತ್ತೊಂದು ಘಟನೆ ; ಅನ್ಯಕೋಮಿನ ಯುವಕರಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ

ಬೆಂಗಳೂರು : ನಗರ್ತ ಪೇಟೆ ಹಲ್ಲೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಅನ್ಯಕೋಮಿನ ಯುವಕರು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಅನೇಕಲ್ ನಲ್ಲಿ ನಡೆದಿದೆ.

ಏನಿದು ಘಟನೆ

ಹಲ್ಲೆಗೊಳಗಾದ ಬಾಲಾಜಿ ಪ್ರಾವಿಶನ್ ಸ್ಟೋರ್ ಮಾಲೀಕ ಲಲಿತ್ ನಿನ್ನೆ ನಿಂಜಾ ಕಾರ್ಡ್ ನಲ್ಲಿ ತರಕಾರಿ ಸೇರಿದಂತೆ ತೆಂಗಿನಕಾಯಿ ಆರ್ಡರ್ ಮಾಡಿದ್ದನು. ಆದರೆ ತೂಕದಲ್ಲಿ ವ್ಯತ್ಯಾಸ ಬಂದ ಹಿನ್ನೆಲೆ ಡೆಲಿವರಿ ಬಾಯ್ ಹಾಗೂ ಲಿಖಿತ್ ನಡುವೆ ಗಲಾಟೆ ನಡೆದಿದೆ. ಹಲ್ಲೆ ನಡೆಸಿದ ಡೆಲಿವರ್ ಬಾಯ್ ಅಷ್ಟಕ್ಕೆ ಸುಮ್ಮನಾಗದೇ ತನ್ನ ಸ್ನೇಹಿತರನ್ನು ಕರೆಸಿ ಮತ್ತೆ ಹಲ್ಲೆ ನಡೆಸಲು ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಲಿಖಿತ್ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಡೆಲಿವರಿ ಬಾಯ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular