ಮಾಸ್ಕೋ : 15 ಪ್ರಯಾಣಿಕರನ್ನು ಹೊತ್ತ ರಷ್ಯಾದ ರಕ್ಷಣಾ ಸಚಿವಾಲಯದ ಸರಕು ವಿಮಾನವು ಮಂಗಳವಾರ ಮಾಸ್ಕೋದ ಈಶಾನ್ಯ ಭಾಗದಲ್ಲಿರುವ ಇವಾನೊವೊ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಶ್ಚಿಮ ರಷ್ಯಾದ ವಾಯುನೆಲೆಯಿಂದ ಇಲ್ಯುಶಿನ್ ಇಲ್ -76 ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ. ರಷ್ಯಾದ ರಕ್ಷಣಾ ಸಚಿವರ ಪ್ರಕಾರ, ಟೇಕ್ ಆಫ್ ಸಮಯದಲ್ಲಿ ಎಂಜಿನ್ ಬೆಂಕಿ ಅಪಘಾತಕ್ಕೆ ಕಾರಣವಾಗಿರಬಹುದು.
ವಿಮಾನದಲ್ಲಿ ಎಂಟು ಸಿಬ್ಬಂದಿ ಮತ್ತು ಏಳು ಪ್ರಯಾಣಿಕರು ಇದ್ದರು ಎಂದು ವರದಿಯಾಗಿದೆ. ಅಲ್ಲಿನ ಮಾಧ್ಯಮಗಳ ಪ್ರಕಾರ, ಬದುಕುಳಿದವರು ಯಾರೂ ಇಲ್ಲ ಎಂದು ವರದಿ ತಿಳಿಸಿದೆ.
A Russian military transport plane has caught on fire and crashed in the Ivanovo region northeast of Moscow, media reported Tuesday.
Read more here: https://t.co/E8iUbp9tV5 pic.twitter.com/U0L38rGXaA
— The Moscow Times (@MoscowTimes) March 12, 2024

