HomeEntertainment'ಭರ್ಜರಿ ಗಂಡು' ಚಿತ್ರದ ವಿಡಿಯೋ ಹಾಡು ರಿಲೀಸ್

‘ಭರ್ಜರಿ ಗಂಡು’ ಚಿತ್ರದ ವಿಡಿಯೋ ಹಾಡು ರಿಲೀಸ್

ಪ್ರಸಿದ್ಧ್ ನಿರ್ದೇಶನದ ಕಿರಣ್ ರಾಜ್ ಅಭಿನಯದ ‘ಭರ್ಜರಿ ಗಂಡು’ ಚಿತ್ರದ ವಿಡಿಯೋ ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.

‘ಸುಕ್ಕ ಸಾರಾಯಿಗಿಂತ ತುಂಬಾ ಡೇಂಜರ್ ಹುಡುಗೀರು’ ಎಂಬ ಈ ಹಾಡಿಗೆ ನವೀನ್ ಸಜ್ಜು ಮತ್ತು ಅನಿರುದ್ಧ ಶಾಸ್ತ್ರೀ ದ್ವನಿಯಾಗಿದ್ದು, ಗುಮ್ಮಿನೇನಿ ವಿಜಯ್ ಸಂಗೀತ ಮತ್ತು ಚೇತನ್ ಕುಮಾರ್ ಸಾಹಿತ್ಯವಿದೆ.

ಈ ಚಿತ್ರವನ್ನು ಪ್ರಸಿದ್ಧ್ ಸಿನಿಮಾಸ್ ಕ್ಯಾಂಪ್ ಬ್ಯಾನರ್ ನಲ್ಲಿ ಪ್ರಸಿದ್ಧ್, ಮದನ್ ಗೌಡ ಮತ್ತು ಅನಿಲ್ ಕುಮಾರ್ ನಿರ್ಮಾಣ ಮಾಡಿದ್ದು, ರಮೇಶ್ ರೆಡ್ಡಿ ಮತ್ತು ಸುದರ್ಶನ್ ಸುಂದರ್ ರಾಜ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಕಿರಣ್ ರಾಜ್ ಅವರಿಗೆ ಜೋಡಿಯಾಗಿ ಯಶ ಶಿವಕುಮಾರ್ ಅಭಿನಯಿಸಿದ್ದಾರೆ. ವೆಂಕಿ ಸಂಕಲನ, ಕಿಟ್ಟಿ ಕೌಶಿಕ್ ಛಾಯಾಗ್ರಹಣ ಮತ್ತು ಮಳವಳ್ಳಿ ಸಾಯಿ ಕೃಷ್ಣ ಸಂಭಾಷಣೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular