HomeEntertainment'ಮೆಹಬೂಬಾ' ಚಿತ್ರದ ವಿಡಿಯೋ ಹಾಡು ರಿಲೀಸ್ ಜಸ್ಕರನ್ ಸಿಂಗ್ ಕಂಠಕ್ಕೆ ಗಾನಪ್ರಿಯರು ಫಿದಾ

‘ಮೆಹಬೂಬಾ’ ಚಿತ್ರದ ವಿಡಿಯೋ ಹಾಡು ರಿಲೀಸ್ ಜಸ್ಕರನ್ ಸಿಂಗ್ ಕಂಠಕ್ಕೆ ಗಾನಪ್ರಿಯರು ಫಿದಾ

ಅನುಪ್ ಆಂಟೋನಿ ನಿರ್ದೇಶನದ ಶಶಿ ಅಭಿನಯದ ‘ಮೆಹಬೂಬಾ’ ಚಿತ್ರದ ವಿಡಿಯೋ ಹಾಡಿನ ಬಿಡುಗಡೆ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಹಾಡನ್ನು ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಮೆಹಬೂಬ’ ಎಂಬ ಈ ಟೈಟಲ್ ಹಾಡಿಗೆ ಸರಿಗಮಪ ಖ್ಯಾತಿಯ ಜಸ್ಕರನ್ ಸಿಂಗ್ ಧ್ವನಿಯಾಗಿದ್ದು, ಮನು ಮ್ಯಾಥ್ಯೂಸ್ ಸಂಗೀತ ಮತ್ತು ವಿ ರಘು ಶಾಸ್ತ್ರಿ ಸಾಹಿತ್ಯವಿದೆ.

ಈ ಚಿತ್ರದಲ್ಲಿ ಶಶಿ ಅವರಿಗೆ ಜೋಡಿಯಾಗಿ ಪಾವನ ಗೌಡ ಅಭಿನಯಿಸಿದ್ದು, ಶ್ರೀ ಬಾಲಾಜಿ ಮೋಶನ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ನಟ ಶಶಿ ಅವರೇ ಬಂಡವಾಳ ಹೂಡಿದ್ದಾರೆ. ಕೆಎಂ ಪ್ರಕಾಶ್ ಸಂಕಲನ, ಮತ್ತು ಕಿರಣ್ ಹಂಪಾಪುರ ಛಾಯಾಗ್ರಹಣವಿದೆ. ಇದೇ ಮಾರ್ಚ್ 11ಕ್ಕೆ ಈ ಸಿನಿಮಾ ರಾಜ್ಯದ್ಯಂತ ತೆರೆ ಮೇಲೆ ಬರಲಿದೆ.

For Latest News Updates, Join Our Whatsapp Community🚩
RELATED ARTICLES

Most Popular