HomeIndiaಪುಟ್ಟ ಬಾಲಕಿಯ ಪೇಂಟಿಂಗ್ ಪ್ರದರ್ಶಿಸಿದ ಪ್ರಧಾನಿ ; ಮೆಚ್ಚುಗೆಗೆ ಪಾತ್ರವಾಗಿದೆ ಮೋದಿಯ ಆತ್ಮೀಯ ನಡೆ |Video...

ಪುಟ್ಟ ಬಾಲಕಿಯ ಪೇಂಟಿಂಗ್ ಪ್ರದರ್ಶಿಸಿದ ಪ್ರಧಾನಿ ; ಮೆಚ್ಚುಗೆಗೆ ಪಾತ್ರವಾಗಿದೆ ಮೋದಿಯ ಆತ್ಮೀಯ ನಡೆ |Video Viral

2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮಾರ್ಚ್ 1 ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅರಂಬಾಗ್ಗೆ ಒಂದು ದಿನದ ಪ್ರವಾಸವನ್ನು ಪ್ರಾರಂಭಿಸಿದರು.

7,200 ಕೋಟಿ ರೂ.ಗಳ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ನಡುವೆ, ಅನಿರೀಕ್ಷಿತ ಮತ್ತು ಹೃದಯಸ್ಪರ್ಶಿ ಘಟನೆ ನಡೆದಿದೆ.

ಬಾಲಕಿಯೊಬ್ಬಳು ಜಗನ್ನಾಥನ ವರ್ಣಚಿತ್ರವನ್ನು ಹಿಡಿದುಕೊಂಡು ಅದನ್ನು ಪ್ರಧಾನಿಗೆ ತೋರಿಸಲು ಪ್ರಯತ್ನಿಸಿದ್ದಾಳೆ.ಬಾಲಕಿ ಮತ್ತು ಆಕೆಯ ವರ್ಣಚಿತ್ರವನ್ನು ಗಮನಿಸಿದ ಪ್ರಧಾನಿ ಮೋದಿ ತಕ್ಷಣವೇ ತಮ್ಮ ಭದ್ರತಾ ಸಿಬ್ಬಂದಿಗೆ ಕಲಾಕೃತಿಯನ್ನು ತರುವಂತೆ ಸೂಚನೆ ನೀಡಿದರು. ನಂತರ ಬಾಲಕಿಯ ಪೇಟಿಂಗ್ ನ್ನು ಸಭೆಯಲ್ಲಿ ಪ್ರದರ್ಶನ ಮಾಡಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜಕೀಯವನ್ನು ಮೀರಿ, ವಯಸ್ಸು ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ನಾಗರಿಕರೊಂದಿಗೆ ಹೃತ್ಪೂರ್ವಕ ಸಂವಹನ ನಡೆಸುವ ಪ್ರಧಾನಿ ಮೋದಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular