HomeKarnatakaಸರ್ವೇ ಕಾರ್ಯಕ್ಕೆ ಮತ್ತಷ್ಟು ವೇಗ: 991 ಪರವಾನಿಗೆ ಸರ್ವೆಯರ್, 364 ಸರ್ಕಾರಿ ಸರ್ವೆಯರ್ ನೇಮಕ: ಎಲ್ಲಾ...

ಸರ್ವೇ ಕಾರ್ಯಕ್ಕೆ ಮತ್ತಷ್ಟು ವೇಗ: 991 ಪರವಾನಿಗೆ ಸರ್ವೆಯರ್, 364 ಸರ್ಕಾರಿ ಸರ್ವೆಯರ್ ನೇಮಕ: ಎಲ್ಲಾ ತಾಲೂಕಿಗೆ ‘ಸರ್ವೇ ರೋವರ್’

ಬೆಂಗಳೂರು: ಸರ್ವೇ ಕಾರ್ಯಕ್ಕೆ ಮತ್ತಷ್ಟು ವೇಗ ನೀಡುವ ಸಲುವಾಗಿ ಸರ್ಕಾರ ಕ್ರಮ ಕೈಗೊಂಡಿದ್ದು, 991 ಪರವಾನಿಗೆ ಸರ್ವೇಯರ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.

991 ಪರವಾನಿಗೆ ಹೊಂದಿದ ಸರ್ವೇ ಯರ್ ಗಳ ಜೊತೆಗೆ 364 ಸರ್ಕಾರಿ ಸರ್ವೇಯರ್ ಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ. ಸರ್ವೇ ಕೆಲಸದ ಮೇಲುಸ್ತುವಾರಿಗೆ 27 ಎ.ಡಿ.ಎಲ್.ಆರ್.ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರೊಂದಿಗೆ ಸರ್ವೇ ಕೆಲಸವನ್ನು ವೇಗವಾಗಿಸಲು ಎಲ್ಲ ತಾಲೂಕಿಗಳಿಗೂ ಸರ್ವೇ ರೋವರ್ ಉಪಕರಣ ಖರೀದಿಸಲಾಗುತ್ತಿದೆ. 18 ಕೋಟಿ ರೂ. ವೆಚ್ಚದಲ್ಲಿ ಒಟ್ಟು 372 ಸರ್ವೇ ರೋವರ್ ಗಳನ್ನು ಖರೀದಿಸಲಿದ್ದು, ತಾಲೂಕುಗಳಿಗೆ ಟೋಟಲ್ ಸ್ಟೇಷನ್ ಸರ್ವೇ ಉಪಕರಣಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular