HomeLive Newsಪ್ರೊ ಕಬಡ್ಡಿ: ನಾಳೆ ಫೈನಲ್ ನಲ್ಲಿ ಪುಣೇರಿ ಪಲ್ಟನ್ - ಹರಿಯಾಣ ಸ್ಟೀಲರ್ಸ್ ಮುಖಾಮುಖಿ; ಯಾರಿಗೆ...

ಪ್ರೊ ಕಬಡ್ಡಿ: ನಾಳೆ ಫೈನಲ್ ನಲ್ಲಿ ಪುಣೇರಿ ಪಲ್ಟನ್ – ಹರಿಯಾಣ ಸ್ಟೀಲರ್ಸ್ ಮುಖಾಮುಖಿ; ಯಾರಿಗೆ ಒಲಿಯಲಿದೆ ವಿಜಯಮಾಲೆ ?

ನಿನ್ನೆ ನಡೆದ ಪ್ರೊ ಕಬಡ್ಡಿಯ ಸೆಮಿಫೈನಲ್ ಪಂದ್ಯಗಳಲ್ಲಿ ಸಿಂಹದ ಮರಿ ಸೈನ್ಯ ಪುಣೇರಿ ಪಲ್ಟನ್ ತಂಡ ಪಾಟ್ನಾ ಪೈರೇಟ್ಸ್ ಎದುರು ಭರ್ಜರಿ ಜಯ ಸಾಧಿಸಿದರೆ, ಅಭಿಷೇಕ್ ಬಚ್ಚನ್ ಮಾಲೀಕತ್ವದ ಡಿಪೆಂಡಿಂಗ್ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಜೊತೆ ಹರಿಯಾಣ ಸ್ಟೀಲರ್ಸ್ ಜಯಭೇರಿಯಾಗುವ ಮೂಲಕ ನಿಬ್ಬೆರಗಾಗುವಂತೆ ಮಾಡಿದೆ. ಈ ಮೂಲಕ ಪುಣೇರಿ ಪಲ್ಟನ್ ಮತ್ತು ಹರಿಯಾಣ ಫೈನಲ್ ಪ್ರವೇಶಿಸಿವೆ.

ನಾಳೆ ಶುಕ್ರವಾರ ಹೈದರಾಬಾದ್ ನ ಬಾಲಯೋಗಿ ಇಂಡೋರ್ ಸ್ಟೇಡಿಯಂ ನಲ್ಲಿ ಫೈನಲ್ ಪಂದ್ಯ ನಡೆಯುತ್ತಿದ್ದು, ಕಬ್ಬಡ್ಡಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಎರಡು ತಂಡಗಳಲ್ಲೂ ಡಿಪೆಂಡರ್ ಗಳದ್ದೇ ಅಬ್ಬರವಿದ್ದು,  ಯಾವ ತಂಡ ಈ ಬಾರಿ ಟ್ರೋಫಿ ಎತ್ತಲಿದೆ ಎಂಬ ಕುತೂಹಲ ಕಬಡ್ಡಿ ಪ್ರೇಮಿಗಳಲ್ಲಿ ಮೂಡಿದೆ. ನಾಳೆ ಪ್ರೊ ಕಬಡ್ಡಿ ಫೈನಲ್ ಪಂದ್ಯವನ್ನು ವೀಕ್ಷಿಸಲು ಬಾಲಿವುಡ್ ನ ಹಲವಾರು ಸಿನಿ ತಾರೆಯರು ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular