HomeIndiaಭೀಕರ ರಸ್ತೆ ಅಪಘಾತದಲ್ಲಿ ಇಂಟೆಲ್ ನ ಮಾಜಿ ನಿರ್ದೇಶಕ ಅವತಾರ್ ಸೈನಿ ಸಾವು

ಭೀಕರ ರಸ್ತೆ ಅಪಘಾತದಲ್ಲಿ ಇಂಟೆಲ್ ನ ಮಾಜಿ ನಿರ್ದೇಶಕ ಅವತಾರ್ ಸೈನಿ ಸಾವು

ಮಹಾರಾಷ್ಟ್ರದ ನವೀ ಮುಂಬೈನ ಪಾಮ್ ಬೀಚ್ ರಸ್ತೆಯ ಟ್ರಾಫಿಕ್ ಲೈಟ್ ಬಳಿ ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಂಟೆಲ್ ನ ಮಾಜಿ ನಿರ್ದೇಶಕ ಅವತಾರ್ ಸೈನಿ ಸಾವನ್ನಪ್ಪಿದ್ದಾರೆ.

ಘಟನೆಯ ಸಮಯದಲ್ಲಿ, ಸೈಕ್ಲಿಸ್ಟ್ ಅವತಾರ್ ಸೈನಿ ಚೆಂಬೂರಿನಿಂದ ಖಾರ್ಘರ್ಗೆ ಪ್ರಯಾಣಿಸುತ್ತಿದ್ದರು. ಸೈನಿ ಒಂದು ಗುಂಪಿನೊಂದಿಗೆ ಸವಾರಿ ಮಾಡುತ್ತಿದ್ದಾಗ ಬುಧವಾರ ಮುಂಜಾನೆ ಈ ದುರಂತ ಸಂಭವಿಸಿದೆ.

ಸೈನಿ ಬೇಲಾಪುರದ ಕಡೆಗೆ ಸವಾರಿ ಮಾಡುತ್ತಿದ್ದಾಗ ನೆರೂಲ್ನ ಸೆಕ್ಟರ್ 50 ರಲ್ಲಿ ಟ್ರಾಫಿಕ್ ಸಿಗ್ನಲ್ ಬಳಿ ಬಂದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular