HomeEntertainmentನಾಗಭೂಷಣ್ ಅಭಿನಯದ 'ವಿದ್ಯಾಪತಿ' ಚಿತ್ರಕ್ಕೆ ನಾಯಕಿಯಾದ ಮಲೈಕಾ ವಾಸುಪಾಲ್

ನಾಗಭೂಷಣ್ ಅಭಿನಯದ ‘ವಿದ್ಯಾಪತಿ’ ಚಿತ್ರಕ್ಕೆ ನಾಯಕಿಯಾದ ಮಲೈಕಾ ವಾಸುಪಾಲ್

‘ಟಗರು ಪಲ್ಯ’ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ನಾಗಭೂಷಣ್ ಅಭಿನಯಿಸುತ್ತಿರುವ ‘ವಿದ್ಯಾಪತಿ’ ಚಿತ್ರಕ್ಕೆ ನಾಯಕಿಯಾಗಿ ಮಲೈಕಾ ವಾಸುಪಾಲ್ ಆಯ್ಕೆಯಾಗಿದ್ದಾರೆ.

ಹಿಟ್ಲರ್ ಕಲ್ಯಾಣ ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಇವರು ಇತ್ತೀಚಿಗಷ್ಟೇ ಚಿಕ್ಕಣ್ಣ ಜೊತೆ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಕಂಡಿರುವ ಮಲೈಕಾ ವಾಸುಪಾಲ್ ಅವರಿಗೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಆಫರ್ಗಳು ಬರುತ್ತಿವೆ.

ಇಶಾಮ್ ಮತ್ತು ಹಸೀನ್ ಖಾನ್ ಅವರ ನಿರ್ದೇಶನ ಮತ್ತು ಸಂಕಲನವಿರುವ ವಿದ್ಯಾಪತಿ ಚಿತ್ರವನ್ನು ಡಾಲಿ ಧನಂಜಯ್ ತಮ್ಮ ಡಾಲಿ ಪಿಚ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದು, ನಾಗಭೂಷಣ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಲವಿತ್ ಛಾಯಾಗ್ರಾಹಣ, ದಾಸ್ಕೋಟ್ ಸಂಗೀತ ಸಂಯೋಜನೆ ನೀಡಿದ್ದಾರೆ. ಮುರಳಿ ನೃತ್ಯ, ಅರ್ಜುನ್ ಸಾಹಸ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular