HomeKarnatakaBIG NEWS: ರಾಜ್ಯಸಭಾ ಚುನಾವಣೆ; ಈವರೆಗೆ 39 ಶಾಸಕರಿಂದ ಮತದಾನ; ಹೋಟೆಲ್ ನಿಂದ ಬಸ್ ನಲ್ಲಿ...

BIG NEWS: ರಾಜ್ಯಸಭಾ ಚುನಾವಣೆ; ಈವರೆಗೆ 39 ಶಾಸಕರಿಂದ ಮತದಾನ; ಹೋಟೆಲ್ ನಿಂದ ಬಸ್ ನಲ್ಲಿ ಆಗಮಿಸಿದ ಕಾಂಗ್ರೆಸ್ ಶಾಸಕರು

ಬೆಂಗಳೂರು: ರಾಜ್ಯಸಭಾ ಚುನಾವಣಾ ಮತದಾನ ಪ್ರಕ್ರಿಯೆ ಚುರುಕುಗೊಂಡಿದ್ದು, ಶಾಸಕರು ವಿಧಾನಸೌಧಕ್ಕೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ.

ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯುತ್ತಿದೆ. ಈವರೆಗೆ 39 ಶಾಸಕರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕಾಂಗ್ರೆಸ್ ನ 5, ಬಿಜೆಪಿಯ 30 ಹಾಗೂ ಜೆಡಿಎಸ್ ನ 4 ಶಾಸಕರು ಮತದಾನ ಮಾಡ್ಡಿದ್ದಾರೆ. ಬಿಜೆಪಿ ಶಾಸಕರು 10 ಶಾಸಕರ ತಂಡಗಳಾಗಿ ಬಂದು ಮತದಾನ ಮಾಡುತ್ತಿದ್ದಾರೆ. ಇನ್ನು ರೆಸಾರ್ಟ್ ಗೆ ಶಿಫ್ಟ್ ಆಗಿದ್ದ ಕಾಂಗ್ರೆಸ್ ಶಾಸಕರು ಬಸ್ ಗಳಲ್ಲಿ ಆಗಮಿಸುತ್ತಿದ್ದು, ಮೊದಲ ಬಸ್ ಈಗಾಗಲೇ ವಿಧಾನಸೌಧ ತಲುಪಿದೆ. ಎರಡನೇ ಬಸ್ ಕೂಡ ಹಿಲ್ಟನ್ ಹೋಟೆಲ್ ನಿಂದ ನೇರವಾಗಿ ವಿಧನಸೌಧದತ್ತ ತೆರಳಿದೆ. ಇನ್ನು ಮೂರನೇ ಬಸ್ ನಲ್ಲಿ ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದತ್ತ ತೆರಳಿದ್ದು, ಮತದಾನ ಪ್ರಕ್ರಿಯೆ ತೀವ್ರ ಕುತೂಹಲ ಮೂಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular