BREAKING: ಮಲೈಮಹದೇಶ್ವರ ಬೆಟ್ಟದಲ್ಲಿ ದುರಂತ; ಕಾರು ಹರಿದು ಬಾಲಕಿ ದುರ್ಮರಣ

ಚಾಮರಾಜನಗರ: ಮಲೈಮಹದೇಶ್ವರ ಬೆಟ್ಟದಲ್ಲಿ ದುರಂತವೊಂದು ಸಂಭವಿಸಿದೆ. ಕಾರು ಹರಿದು ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟದಲ್ಲಿ ಈ ಅನಾಹುತ ಸಂಭವಿಸಿದ್ದು, ಪಾರ್ಕಿಂಗ್ ಲಾಟ್ ನಿಮ್ದ ಕಾರು ಹೊರ ತೆಗೆಯುತ್ತಿದ್ದಾಗ ಆಟವಾಡುತ್ತಿದ್ದ ಬಾಲಕಿ ಮೇಲೆ ಕಾರು ಹರಿದಿದೆ.

ಘಟನೆಯಲ್ಲಿ ತಮಿಳುನಾಡು ಮೂಲದ 7 ವರ್ಷದ ಬಾಲಕಿ ಸುಷ್ಮಿತಾ ಸಾವನ್ನಪ್ಪಿದ್ದಾಳೆ. ಮಲೈಮಹಾದೇಶ್ವರ ಬೆತ್ಟದ ಪಾಲಾರ್ ರಸ್ತೆಯ ಪಾರ್ಕಿಂಗ್ ನಲ್ಲಿ ಕಾರು ತೆಗೆಯುತ್ತಿದ್ದಾಗ ಈ ಘಟನೆ ನಡೆದಿದೆ. ಕಾರು ಚಾಲಕನ ಅಜಾಗರೂಕತೆಯೇ ದುರಂತಕ್ಕೆ ಕಾರಣವಾಗಿದ್ದು, ಘಟನಾ ಸ್ಥಳಕ್ಕೆ ಮಲೈ ಮಹದೇಶ್ವರ ಬೆತ್ಟದ ಪೊಲೀಸರು ಭೇಟಿ ನೀಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read