ನವದೆಹಲಿ : ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ದೆಹಲಿ ಹೈಕೋರ್ಟ್ ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಬಲವಂತ್ ದೇಸಾಯಿ ಅವರ ಹೆಸರಿನಲ್ಲಿ ಬರೆಯಲಾದ ಇಮೇಲ್ ನಲ್ಲಿ ಫೆಬ್ರವರಿ 15, 2024 ರ ಗುರುವಾರ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ರಿಜಿಸ್ಟ್ರಾರ್ ಜನರಲ್ ಗೆ ಕಳುಹಿಸಲಾದ ಇಮೇಲ್ ಸಂದೇಶದಲ್ಲಿ, “ನಾನು 15/02/2024 ರಂದು ನಿಮ್ಮನ್ನು ಬಾಂಬ್ ನಿಂದ ಸ್ಫೋಟಿಸುತ್ತೇನೆ ಎಂದು ಬರೆಯಲಾಗಿದೆ. ಇದು ಅತ್ಯಂತ ದೊಡ್ಡ ಸ್ಫೋಟವಾಗಲಿದೆ. ನೀವು ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ ಎಂದು ಬೆದರಿಕೆಯೊಡ್ಡಲಾಗಿದೆ. ಬೆದರಿಕೆಗೆ ಪ್ರತಿಕ್ರಿಯೆಯಾಗಿ, ಹೈಕೋರ್ಟ್ ಇಮೇಲ್ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ ..