HomeEntertainment'ಪ್ರಣಯಂ' ಚಿತ್ರದ ಮತ್ತೊಂದು ಮೆಲೋಡಿ ಗೀತೆ ರಿಲೀಸ್

‘ಪ್ರಣಯಂ’ ಚಿತ್ರದ ಮತ್ತೊಂದು ಮೆಲೋಡಿ ಗೀತೆ ರಿಲೀಸ್

ಎಸ್ ದತ್ತಾತ್ರೇಯ ನಿರ್ದೇಶನದ ‘ಪ್ರಣಯಂ’ ಚಿತ್ರ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ರಾಜ್ಯದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ‘ಪ್ರಣಯಂ’ ಚಿತ್ರತಂಡ ವಿಡಿಯೋ ಹಾಡೊಂದನ್ನು ಜನಕರ್ ಮ್ಯೂಸಿಕ್ ಯೂಟ್ಯೂಬಲ್ಲಿ ಬಿಡುಗಡೆ ಮಾಡಿದೆ.

”ಮಳೆಗಾಲ ಬಂತು ಸನಿಹ” ಎಂಬ ಈ ಹಾಡಿಗೆ ಖ್ಯಾತ ಗಾಯಕ ಸೋನು ನಿಗಮ್ ಧ್ವನಿಯಾಗಿದ್ದು, ಮನೋಮೂರ್ತಿ ಸಂಗೀತ ಸಂಯೋಜನೆ ನೀಡಿದ್ದಾರೆ. ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರದಲ್ಲಿ ರಾಜ ವರ್ಧನ್ ಮತ್ತು ನೈನಾ ಗಂಗೂಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗೋವಿಂದೇಗೌಡ, ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಮಾನ್ಸಿ ವೆಂಚರ್ಸ್ ಬ್ಯಾನರ್ ನಲ್ಲಿ ಪರಮೇಶ ನಿರ್ಮಾಣ ಮಾಡಿದ್ದಾರೆ. ಗಿರೀಶ್ ಕುಮಾರ್ ಅವರ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೇಶನ, ನಾಗೇಶ್ ಆಚಾರ್ಯ ಛಾಯಾಗ್ರಾಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular