HomeIndiaದೆಹಲಿ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿವೇ ತಪ್ಪಿಸಿಕೊಂಡ ಇಂಡಿಗೋ ವಿಮಾನ

ದೆಹಲಿ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿವೇ ತಪ್ಪಿಸಿಕೊಂಡ ಇಂಡಿಗೋ ವಿಮಾನ

ನವದೆಹಲಿ: ಅಮೃತಸರದಿಂದ ಬಂದ ಇಂಡಿಗೋ ವಿಮಾನವು ಭಾನುವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಟ್ಯಾಕ್ಸಿವೇ ತಪ್ಪಿಸಿಕೊಂಡಿದೆ. ಇದರಿಂದಾಗಿ ಸುಮಾರು 15 ನಿಮಿಷಗಳ ಕಾಲ ರನ್‌ವೇ ಒಂದನ್ನು ನಿರ್ಬಂಧಿಸಲಾಗಿತ್ತು.

A320 6E 2221 ವಿಮಾನ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(IGIA) ಗೊತ್ತುಪಡಿಸಿದ ಟ್ಯಾಕ್ಸಿವೇಯನ್ನು ತಪ್ಪಿಸಿಕೊಂಡ ನಂತರ ರನ್ ವೇ 28/10 ರ ಅಂತ್ಯಕ್ಕೆ ಹೋಯಿತು.

ಘಟನೆಯಿಂದಾಗಿ ಸುಮಾರು 15 ನಿಮಿಷಗಳ ಕಾಲ ರನ್‌ ವೇ ನಿರ್ಬಂಧಿಸಲಾಗಿದ್ದು, ಕೆಲವು ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ. ಇಂಡಿಗೋ ಟೋಯಿಂಗ್ ವ್ಯಾನ್ ವಿಮಾನವನ್ನು ರನ್‌ ವೇಯ ಡೆಡ್ ಎಂಡ್‌ ನಿಂದ ಪಾರ್ಕಿಂಗ್ ಬೇ ಗೆ ಎಳೆದಿದೆ. IGIA ದೇಶದ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. ಪ್ರತಿದಿನ ಸುಮಾರು 1,400 ವಿಮಾನಗಳನ್ನು ನಿರ್ವಹಿಸುತ್ತದೆ. ಇದು ನಾಲ್ಕು ಕಾರ್ಯಾಚರಣೆಯ ರನ್ ವೇಗಳನ್ನು ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular