HomeEntertainment'ಧೈರ್ಯಂ ಸರ್ವತ್ರ ಸಾಧನಂ' ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಸಾಯಿರಾಮ್ ನಿರ್ದೇಶನದ ಬಹುನಿರೀಕ್ಷಿತ ‘ಧೈರ್ಯಂ ಸರ್ವತ್ರ ಸಾಧನಂ’  ಚಿತ್ರದ ”ಯಾರೋ ಬೆಂಕಿ ಹಚ್ಚಿದ ಕಿಡಿ” ಎಂಬ ಲಿರಿಕಲ್ ಹಾಡು ಇಂದು youtube ಅಲ್ಲಿ ರಿಲೀಸ್ ಆಗಿದೆ.

ಶಶಾಂಕ್ ಶೇಷಗಿರಿ, ಚೇತನ್ ನಾಯಕ್ ಹಾಗೂ ಪಂಚಂ ಜೀವ ಈ ಹಾಡಿಗೆ ಧ್ವನಿಯಾಗಿದ್ದು, ಜುಡಾ ಸ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದಾರೆ. ಕಿನ್ನಾಲ್ ರಾಜ್ ಸಾಹಿತ್ಯ ಬರೆದಿದ್ದಾರೆ.

ಎಪಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಆನಂದ್ ಬಾಬು ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ವಿವನ್, ಅನುಷಾ ರೈ, ಯಶ್ ಶೆಟ್ಟಿ, ಬಾಲರಾಜ್ವಾಡಿ, ಪ್ರದೀಪ್ ಪೂಜಾರಿ, ವರ್ಧನ್, ಅರ್ಜುನ್ ಪಾಳೆಗಾರ್, ಪದ್ಮಿನಿ ಶೆಟ್ಟಿ, ಡಿಜೆ ಚಕ್ರವರ್ತಿ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಶ್ರೀಕಾಂತ್ ಸಂಕಲನ ಮತ್ತು ರವಿ ಕುಮಾರ್ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular