HomeLive Newsಇಂದಿನಿಂದ ಕೊಲ್ಕತ್ತಾದಲ್ಲಿ ಪ್ರೊ ಕಬಡ್ಡಿ ಲೀಗ್

ಇಂದಿನಿಂದ ಕೊಲ್ಕತ್ತಾದಲ್ಲಿ ಪ್ರೊ ಕಬಡ್ಡಿ ಲೀಗ್

ಪ್ರೊ ಕಬಡ್ಡಿ ಪಂದ್ಯಗಳು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದು, ಎಲ್ಲಾ ಪಂದ್ಯಗಳು ರೋಚಕತೆಯಿಂದ ಸಾಗುತ್ತಿವೆ. ದೆಹಲಿಯಲ್ಲಿದ್ದ ಪ್ರೊ ಕಬಡ್ಡಿ ಪಂದ್ಯಗಳು ಮುಕ್ತಾಯವಾಗಿದ್ದು, ಇಂದಿನಿಂದ ಫೆಬ್ರವರಿ 14ರವರೆಗೆ ಕೊಲ್ಕತ್ತಾದಲ್ಲಿ ಕಬಡ್ಡಿ ಪಂದ್ಯಗಳು ನಡೆಯಲಿವೆ.

ಮೊದಲ ಪಂದ್ಯದಲ್ಲೇ ಬೆಂಗಾಲ್ ವಾರಿಯರ್ಸ್ ತನ್ನ ಮನೆಯಂಗಳದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಗುಜರಾತ್ ಜೈಂಟ್ಸ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೆ ಬೆಂಗಾಲ್ ವಾರಿಯರ್ಸ್ ಒಂಬತ್ತನೇ ಸ್ಥಾನದಲ್ಲಿದೆ.

ಪ್ರೊ ಕಬಡ್ಡಿಯ ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್ ಮತ್ತು ಹರಿಯಾಣ ಸ್ಟೀಲರ್ಸ್ ಮುಖಾಮುಖಿಯಾಗಲಿವೆ. ಯುಪಿ ಯೋಧಾಸ್  ತಂಡದಲ್ಲಿ ಅನುಭವಿ ಆಟಗಾರರು ತಮ್ಮ ಫಾರ್ಮ್ ಕಳೆದುಕೊಂಡಿದ್ದು, ಕರ್ನಾಟಕದ ಯುವ ಪ್ರತಿಭೆ ಗಗನ್ ಗೌಡ ರೈಡಿಂಗ್ನಲ್ಲಿ ಮಿಂಚುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular