HomeInternationalBREAKING : ಬಾಗ್ದಾದ್ ನಲ್ಲಿ ಅಮೆರಿಕ ಡ್ರೋನ್ ದಾಳಿ: ಇರಾನ್ ಬೆಂಬಲಿತ ಸೇನಾ ಕಮಾಂಡರ್ ಸಾವು

BREAKING : ಬಾಗ್ದಾದ್ ನಲ್ಲಿ ಅಮೆರಿಕ ಡ್ರೋನ್ ದಾಳಿ: ಇರಾನ್ ಬೆಂಬಲಿತ ಸೇನಾ ಕಮಾಂಡರ್ ಸಾವು

 

ಇರಾಕ್‌ ನಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯ ಪರಿಣಾಮ ಉನ್ನತ ಶ್ರೇಣಿಯ ಮಿಲಿಟರಿ ಕಮಾಂಡರ್ ಅಧಿಕಾರಿ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ಪ್ರಬಲ ಕಟೈಬ್ ಹಿಜ್ಬುಲ್ಲಾ ಮಿಲಿಟಿಯಾದ ಮೂವರು ಸದಸ್ಯರು ಸಹ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ.

ಪೂರ್ವ ಬಾಗ್ದಾದ್ನ ಮಸ್ಟಲ್ ಪ್ರದೇಶದ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.  ಯುಎಸ್ ಈ ದಾಳಿಯಲ್ಲಿ ಹಿರಿಯ ಕಟೈಬ್ ಹಿಜ್ಬುಲ್ಲಾ ಕಮಾಂಡರ್ ಅನ್ನು ಸಹ ಗುರಿಯಾಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರಲ್ಲಿ ಒಬ್ಬನನ್ನು ವಿಸ್ಸಾಮ್ ಮೊಹಮ್ಮದ್ ಅಬು ಬಕರ್ ಅಲ್-ಸಾದಿ ಎಂದು ಗುರುತಿಸಲಾಗಿದೆ ಎಂದು ಇರಾಕ್ನಲ್ಲಿರುವ ಇರಾನ್ ಬೆಂಬಲಿತ ಮಿಲಿಟಿಯಾದ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಸಿರಿಯಾದಲ್ಲಿ ಕಟೈಬ್ ಹಿಜ್ಬುಲ್ಲಾ ಕಾರ್ಯಾಚರಣೆಯ ಉಸ್ತುವಾರಿ ಕಮಾಂಡರ್ ಆಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ, ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್ ಬೆಂಬಲಿತ ಭಯೋತ್ಪಾದಕ ಗುಂಪುಗಳ ಡಜನ್ಗಟ್ಟಲೆ ಗುರಿಗಳ ಮೇಲೆ ಯುಎಸ್ ದಾಳಿ ನಡೆಸಿತ್ತು, ಇದರಿಂದಾಗಿ ಈ ಪ್ರದೇಶದಲ್ಲಿ ಈಗಾಗಲೇ ಉದ್ವಿಗ್ನತೆ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಉದ್ವಿಗ್ನತೆಯ ಮಧ್ಯೆ ಈ ದಾಳಿ ಮತ್ತೊಮ್ಮೆ ನಡೆದಿದೆ. ಜೋರ್ಡಾನ್ ಸೇನಾ ನೆಲೆಯ ಮೇಲೆ ನಡೆದ ದಾಳಿಗೆ ಇರಾಕ್ ನ ಇಸ್ಲಾಮಿಕ್ ಪ್ರತಿರೋಧವೇ ಕಾರಣ ಎಂದು ಅಮೆರಿಕ ಆರೋಪಿಸಿದೆ. ಹತ್ಯೆಗೀಡಾದ ಮಿಲಿಟಿಯಾ ಕಮಾಂಡರ್ ಕಟೈಬ್ ಹಿಜ್ಬುಲ್ಲಾ ಇಸ್ಲಾಮಿಸ್ಟ್ ಗುಂಪಿನ ನಾಯಕ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular