HomeEntertainment'ಕಾಟೇರ' ಚಿತ್ರದ 'ಯಾವ ಜನುಮದ ಗೆಳತಿ' ವಿಡಿಯೋ ಹಾಡು ರಿಲೀಸ್

‘ಕಾಟೇರ’ ಚಿತ್ರದ ‘ಯಾವ ಜನುಮದ ಗೆಳತಿ’ ವಿಡಿಯೋ ಹಾಡು ರಿಲೀಸ್

Kannada Cinema; 'ಯಾವ ಜನ್ಮದ ಗೆಳತಿ…': ಕಾಟೇರನ ಡ್ಯುಯೆಟ್ ಹಾಡು ಬಂತು | udayavani

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಚಿತ್ರದ ”ಯಾವ ಜನುಮದ ಗೆಳತಿ” ಎಂಬ ಮೆಲೋಡಿ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಹೇಮಂತ್ ಕುಮಾರ್ ಹಾಗೂ ರಕ್ಷಿತಾ ಸುರೇಶ್ ಈ ಹಾಡಿಗೆ ಧ್ವನಿಯಾಗಿದ್ದು, ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ಕಳೆದ ವರ್ಷ ಡಿಸೆಂಬರ್ 29ರಂದು ಬಿಡುಗಡೆಯಾಗಿದ್ದ ‘ಕಾಟೇರ’ ಸಿನಿಮಾ ಭರ್ಜರಿಯಾಗಿ   ಮುನ್ನುಗ್ಗುತ್ತಲೆ ಇದೆ. ತರುಣ್ ಸುಧೀರ್ ನಿರ್ದೇಶನ ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಆರಾಧನಾ ಪ್ರಮುಖ ಪಾತ್ರದಲ್ಲಿದ್ದು, ಜಗಪತಿ ಬಾಬು, ಶೃತಿ, ಕುಮಾರ್ ಗೋವಿಂದ್, ಪದ್ಮಾ ವಸಂತಿ, ಶ್ರೀನಿವಾಸ ಮೂರ್ತಿ, ಅವಿನಾಶ್, ವೈಜನಾಥ್ ಬಿರಾದರ್ ತೆರೆ ಹಂಚಿಕೊಂಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ತಮ್ಮ ರಾಕ್ ಲೈನ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ನಿರ್ಮಾಣ ಮಾಡಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular