HomeKarnatakaಜೊಮ್ಯಾಟೋ ಸ್ಕೂಟರ್ ಡಿಕ್ಕಿಯಲ್ಲಿ ನಾಗರ ಹಾವು ಪ್ರತ್ಯಕ್ಷ..... ಕಂಗಾಲಾದ ಸವಾರ.....

ಜೊಮ್ಯಾಟೋ ಸ್ಕೂಟರ್ ಡಿಕ್ಕಿಯಲ್ಲಿ ನಾಗರ ಹಾವು ಪ್ರತ್ಯಕ್ಷ….. ಕಂಗಾಲಾದ ಸವಾರ…..

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮನೆಯ ಹೊರಗೆ ಇಟ್ಟ ಶೂಗಳಲ್ಲಿ, ನಿಲ್ಲಿಸಿದ್ದ ವಾಹನಗಳಲ್ಲಿ ಹಾವುಗಳು ಪ್ರತ್ಯಕ್ಷವಾಗುತ್ತಿರುವ ಘಟನೆ ಹೆಚ್ಚುತ್ತಿದೆ. ಅದೇ ರೀತಿ ಇಲ್ಲೋರ್ವ ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ತನ್ನ ಸ್ಕೂಟರ್ ನಿಲ್ಲಿಸಿ ಪುಡ್ ಡಿಲೆವರಿ ಮಾಡಿ ಬರುವಷ್ಟರಲ್ಲಿ ಸ್ಕೂಟರ್ ಡಿಕ್ಕಿಯಲ್ಲಿ ಬೃಹತ್ ನಾಗರ ಹಾವೊಂದು ಸೇರಿಕೊಂಡಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಹೊಸ ರೋಡ್ ನಲ್ಲಿರುವ SJR ಬ್ಲೂ ವಾಟರ್ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಜೊಮ್ಯಾಟೋ ಸ್ಕೂಟರ್ ಡಿಕ್ಕಿಯಲ್ಲಿ ಹಾವು ಇರುವುದನ್ನು ಕಂಡು ಫುಡ್ ಡೆಲಿವರಿ ಬಾಯ್ ಕಂಗಾಲಾಗಿದ್ದಾನೆ.

ತಕ್ಷಣ ಅಪಾರ್ಟ್ಮೆಂಟ್ ನ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾನೆ. ಕೂಡಲೇ ಭದ್ರತಾ ಸಿಬ್ಬಂದಿಗಳು ಹಾವು ಹಿಡಿಯುವವರನ್ನು ಕರೆಸಿ, ಸ್ಕೂಟರ್ ನಲ್ಲಿದ್ದ ಹಾವನ್ನು ರಕ್ಷಿಸಿದ್ದಾರೆ. ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular