HomeKarnatakaಮಾಜಿ ಸಚಿವ ಕೆ.ಹೆಚ್. ರಂಗನಾಥ್ ಮೊಮ್ಮಗ ಹರ್ಷವರ್ಧನ ನಿಧನ

ಮಾಜಿ ಸಚಿವ ಕೆ.ಹೆಚ್. ರಂಗನಾಥ್ ಮೊಮ್ಮಗ ಹರ್ಷವರ್ಧನ ನಿಧನ

ಬೆಂಗಳೂರು : ಮಾಜಿ ಸಚಿವ ಕೆ.ಹೆಚ್.‌ ರಂಗನಾಥ್‌ ಮೊಮ್ಮಗ ಹರ್ಷವರ್ಧನ(33) ಶುಕ್ರವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಕೆಪಿಸಿಸಿ ಸದಸ್ಯ ವಿಜಯ್‌ ಕುಮಾರ್‌ ಅವರ ಪುತ್ರ ಹರ್ಷವರ್ಧನ್‌ ಅವರು ಅಕಾಲಿಕವಾಗಿ ನಿಧನ ಹೊಂದಿದ್ದು, ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular