ಬೆಂಗಳೂರು: ಒಡಿಶಾದಿಂದ ಬೆಂಗಳೂರಿಗೆ ಎರಡು ಕಾರ್ ಗಳಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪುತ್ರ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಗುಂಟೂರಿನಲ್ಲಿ ಗಾಂಜಾ ಸಮೇತ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಹೆಚ್ಎಸ್ಆರ್ ಬಡಾವಣೆಯ ಕಿಶೋರ್ ಪ್ರಕಾಶ್ ರೆಡ್ಡಿ(340, ಸದ್ದು ಗುಂಟೆ ಪಾಳ್ಯದ ಮಾಜಿ ಕಾರ್ಪೊರೇಟರ್ ಪುತ್ರ ಅಭಿನವ್(30), ಬಾಲಾಜಿ ನಗರದ ಸುಮಂತ್ ಕುಮಾರ್(24) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 60 ಕೆಜಿ ಗಾಂಜಾ, 7 ಮೊಬೈಲ್, ಎರಡು ಕಾರು, 2.28 ಲಕ್ಷ ರೂ. ನಗದು ಸೇರಿ 44 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.