HomeLive Newsಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ - ಪಾಟ್ನಾ ಪೈರೇಟ್ಸ್ ಕಾದಾಟ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ – ಪಾಟ್ನಾ ಪೈರೇಟ್ಸ್ ಕಾದಾಟ

ಪ್ರೊ ಕಬಡ್ಡಿ ಸೆಮಿ ಫೈನಲ್  ಪಂದ್ಯಗಳಿಗೆ  ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಇಂದು 98ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ಮುಖಾಮುಖಿಯಾಗಲಿವೆ. ಬೆಂಗಳೂರು ಬುಲ್ಸ್ ಗೆ ಇಂದು  ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಪಾಟ್ನಾ ಪೈರೇಟ್ಸ್ ತಂಡ ತನ್ನ ಹೋಂ ಗ್ರೌಂಡಲ್ಲಿ ಜಯದ  ಓಟ ಮುಂದುವರಿಸಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ. ಬೆಂಗಳೂರು ಬುಲ್ಸ್ ಇಂದಿನ ಪಂದ್ಯ ದಲ್ಲಿ ಪಾಟ್ನಾ ಪೈರೇಟ್ಸ್ ಜೊತೆ ಜಯ ಸಾಧಿಸಿದರೆ ಏಳನೇ ಸ್ಥಾನಕ್ಕೆ ಬರುವ ಅವಕಾಶವಿದೆ.

ಇಂದು ಪ್ರೊ ಕಬಡ್ಡಿಯ ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ಸೆಣಸಾಡಲಿದ್ದು, ಬಲಿಷ್ಠ ಡಿಪೆಂಡರ್ ಗಳನ್ನು ಹೊಂದಿರುವ ತಮಿಳ್ ತಲೈವಾಸ್ ತಂಡ ಅರ್ಜುನ್ ದೇಶವಾಲ್ ಓಟಕ್ಕೆ ಬ್ರೇಕ್ ಹಾಕಲು ಸಜ್ಜಾಗಿದ್ದಾರೆ. ತಮಿಳ್ ತಲೈವಾಸ್ ಒಂದರ ಮೇಲೊಂದು ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರುತ್ತಿದ್ದು, ಮತ್ತೊಮ್ಮೆ ಸೆಮಿ ಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿದೆ. ಕಳೆದ ಬಾರಿಯೂ ಇದೇ ರೀತಿ ಕೊನೆಯ ಹಂತದಲ್ಲಿ  ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಗೆಲ್ಲುವ ಮೂಲಕ ತಮಿಳ್ ತಲೈವಾಸ್ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular