HomeInternationalBREAKING : ಮೆಕ್ಸಿಕೋದಲ್ಲಿ ಭೀಕರ ರಸ್ತೆ ಅಪಘಾತ : ಟ್ರಕ್ ಗೆ ಬಸ್ ಡಿಕ್ಕಿಯಾಗಿ...

BREAKING : ಮೆಕ್ಸಿಕೋದಲ್ಲಿ ಭೀಕರ ರಸ್ತೆ ಅಪಘಾತ : ಟ್ರಕ್ ಗೆ ಬಸ್ ಡಿಕ್ಕಿಯಾಗಿ 19 ಮಂದಿ ಸಾವು

ಮೆಕ್ಸಿಕೊ : ಮೆಕ್ಸಿಕೊದ ವಾಯುವ್ಯ ಸಿನಾಲೊವಾ ರಾಜ್ಯದಲ್ಲಿ ಮಂಗಳವಾರ ಮುಂಜಾನೆ ಟ್ರಕ್ ಮತ್ತು ಪ್ರಯಾಣಿಕರಿಂದ ತುಂಬಿದ ಬಸ್ ನಡುವೆ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ ಎನ್ + ತಿಳಿಸಿದೆ.

ಮಜಟ್ಲಾನ್ ಮತ್ತು ಲಾಸ್ ಮೊಚಿಸ್ ಅನ್ನು ಸಂಪರ್ಕಿಸುವ ಕರಾವಳಿ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ನಂತರ ಸ್ಥಳದಲ್ಲೇ ಬಸ್‌ ಹೊತ್ತಿ ಉರಿದಿದ್ದು, ಸ್ಥಳಕ್ಕೆ ತುರ್ತು ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular