BIGGBOSS-10 : ‘ಬಿಗ್ ಬಾಸ್’ ವಿನ್ನರ್ ಕಾರ್ತಿಕ್ ಗೆ 50 ಲಕ್ಷದಲ್ಲಿ ಸಿಗೋದು ಎಷ್ಟು ಲಕ್ಷ ಗೊತ್ತಾ..?

ಬೆಂಗಳೂರು : ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ 10 ರ ಗ್ರ್ಯಾಂಡ್ ಫಿನಾಲೆ ಜನವರಿ 28 ರಂದು ಪ್ರಸಾರವಾಗಿದ್ದು, ನಟ ಕಾರ್ತಿಕ್ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

ವಾರಗಳ ತೀವ್ರ ನಾಟಕ, ತಿರುವುಗಳ ನಂತರ, ಸ್ಪರ್ಧಿ ಕಾರ್ತಿಕ್ ಮಹೇಶ್ ವಿಜಯಶಾಲಿಯಾಗಿ ಹೊರಹೊಮ್ಮಿದರುನಿರೂಪಕ ಕಿಚ್ಚ ಸುದೀಪ್ ಕಾರ್ತಿಕ್ ಅವರನ್ನು ವಿಜೇತರೆಂದು ಘೋಷಿಸಿದರು, ಅವರು 2.98 ಕೋಟಿ ಮತಗಳನ್ನು ಗಳಿಸಿದ್ದಾರೆ ಎಂದು ಬಹಿರಂಗಪಡಿಸಿದರು. 50 ಲಕ್ಷ ನಗದು ಬಹುಮಾನ, ಹೊಚ್ಚ ಹೊಸ ಕಾರು ಮತ್ತು ಎಲೆಕ್ಟ್ರಿಕ್ ಮೊಪೆಡ್ ಅವರಿಗೆ ಗಿಫ್ಟ್ ಆಗಿ ಸಿಕ್ಕಿದೆ.

50 ಲಕ್ಷದಲ್ಲಿ ಎಷ್ಟು ಸಿಗುತ್ತೆ..?

ಕಾರ್ತಿಕ್ ವಿನ್ನರ್ ಆಗಿ ಪಡೆದ 50 ಲಕ್ಷ ಹಣದಲ್ಲಿ ಸಿಗುವುದು ಕೇವಲ 34 ಲಕ್ಷದ 40 ಸಾವಿರ. ಇನ್ನುಳಿದ 14.60 ಲಕ್ಷ ಸರ್ಕಾರದ ಟ್ಯಾಕ್ಟ್ ಅಮೌಂಟ್ ಕಟ್ ಆಗುತ್ತದೆ. ಇದರ ಜೊತೆಗೆ ಕಾರ್ತಿಕ್ ಗೆ ಮಾರುತಿ ಸುಜುಕಿ ಕಾರು, ಬೌನ್ಸ್ ಕಡೆಯಿಂದ ಬೈಕ್ ಕೂಡ ಗಿಫ್ಟ್ ಆಗಿ ಸಿಕ್ಕಿದೆ.

ಐದು ಹಾಗೂ ನಾಲ್ಕನೆ ರನ್ನರ್ ಅಪ್ ಆದ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಅವರಿಗೆ ತಲಾ ಎರಡು ಲಕ್ಷ ಹಣ ಸಿಗಲಿದೆ. ಮೂರನೇ ರನ್ನರ್ ಅಪ್ ಆದ ವಿನಯ್ ಗೆ ಐದು ಲಕ್ಷ, ಎರಡನೇ ರನ್ನರ್ ಅಪ್ ಆದ ಸಂಗೀತಾಗೆ ಏಳು ಲಕ್ಷ ಹಾಗೇ ಮೊದಲ ರನ್ನರ್ ಅಪ್ ಆದ ಡೋನ್ ಪ್ರತಾಪ್ ಗೆ 10 ಲಕ್ಷ ಸಿಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read