![](https://kannadadunia.com/wp-content/uploads/2022/08/railways1650074183526.jpg)
ಕೊಪ್ಪಳ : ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರ ಮನವಿ ಮೇರೆಗೆ ಶ್ರೀರಾಮ ದರ್ಶನಕ್ಕೆ ಅಯೋಧ್ಯೆಗೆ ಕೊಪ್ಪಳ ಮಾರ್ಗವಾಗಿ ರೈಲುಗಳ ಸಂಚಾರಕ್ಕೆ ರೈಲ್ವೇ ಇಲಾಖೆಯು ಸ್ಪಂದನೆ ನೀಡಿ, ನಿಗದಿತ ದಿನಗಳಂದು ರೈಲ್ವೇ ವ್ಯವಸ್ಥೆಯನ್ನು ಕಲ್ಪಿಸಿದೆ.
ಕೊಪ್ಪಳದಿಂದ ಅಯೋಧ್ಯಾ ಧಾಮಕ್ಕೆ ಮತ್ತು ಅಯೋಧ್ಯಾ ಧಾಮದಿಂದ ಕೊಪ್ಪಳಕ್ಕೆ ಸಂಚಾರಕ್ಕಾಗಿ ಮನವಿ ಮೇರೆಗೆ ರೈಲ್ವೆ ಇಲಾಖೆಯು ಸಾರ್ವಜನಿಕರಿಗೆ ಮತ್ತು ಭಕ್ತಾಧಿಗಳಿಗೆ ಶ್ರೀರಾಮ ದರ್ಶನ ಪಡೆಯಲು ಕೊಪ್ಪಳ ಮಾರ್ಗವಾಗಿ ರೈಲುಗಳ ಸಂಚಾರಗಳನ್ನು ಪ್ರಾರಂಭಿಸಿದ್ದು, ಈ ಸೇವೆಯ ಸದುಪಯೋಗವನ್ನು ಪ್ರಯಾಣಿಕರು, ಸಾರ್ವಜನಿಕರು, ಭಕ್ತಾಧಿಗಳು ಪಡೆದುಕೊಳ್ಳಬೇಕು ಎಂದು ಸಂಸದರು ತಿಳಿಸಿದ್ದಾರೆ.
ರೈಲುಗಳ ವಿವರ: ಜನವರಿ 31, ಫೆಬ್ರವರಿ 14 ಮತ್ತು 28ರ ಬುಧವಾರ ಬೆಂಗಳೂರು-ಅಯೋಧ್ಯ ರೈಲು, ಫೆ.3, 17 ಮತ್ತು ಮಾರ್ಚ್ 2ರ ಶನಿವಾರ ಅಯೋಧ್ಯಾ ಧಾಮ-ಬೆಂಗಳೂರು, ಫೆ.4 ಮತ್ತು 18ರ ಭಾನುವಾರ ಮೈಸೂರು- ಅಯೋಧ್ಯಾ ಧಾಮ, ಫೆ.7 ಮತ್ತು 21ರ ಬುಧವಾರ ಅಯೋಧ್ಯಾ ಧಾಮ-ಮೈಸೂರು, ಫೆ.7 ಮತ್ತು 21ರ ಬುಧವಾರ ತುಮಕೂರು-ಅಯೋಧ್ಯಾ ಧಾಮ, ಫೆ.10 ಮತ್ತು 24ರ ಶನಿವಾರ ಅಯೋಧ್ಯಾ ಧಾಮ-ತುಮಕೂರು, ಫೆ.11 ಮತ್ತು 25ರ ಭಾನುವಾರ ಚಿತ್ರದುರ್ಗ-ಅಯೋಧ್ಯಾ ಧಾಮ, ಫೆ.14 ಮತ್ತು 28ರ ಬುಧವಾರ ಅಯೋಧ್ಯಾ ಧಾಮ-ಚಿತ್ರದುರ್ಗ, ಫೆ.17ರ ಶನಿವಾರ ಮೈಸೂರು-ಅಯೋಧ್ಯಾ ಧಾಮ, ಫೆ.20ರ ಮಂಗಳವಾರ ಅಯೋಧ್ಯಾ ಧಾಮ-ಮೈಸೂರು, ಫೆ.17ರ ಶನಿವಾರ ಬೆಳಗಾವಿ-ಅಯೋಧ್ಯಾ ಧಾಮ, ಫೆ.20ರ ಮಂಗಳವಾರ ಅಯೋಧ್ಯಾ ಧಾಮ-ಬೆಳಗಾವಿ ರೈಲುಗಳು ಕೊಪ್ಪಳ ಮಾರ್ಗವಾಗಿ ಸಂಚರಿಸಲಿವೆ ಎಂದು ಕೊಪ್ಪಳ ಲೋಕಸಭಾ ಸದಸ್ಯರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.