![](https://kannadadunia.com/wp-content/uploads/2024/01/pumpset.png)
ಧಾರವಾಡ : ಅಕ್ರಮ-ಸಕ್ರಮ ಪಂಪ್ ಸೆಟ್ ಯೋಜನೆಯಡಿ ಟ್ರಾನ್ಸಫಾರ್ಮರ್‍ನಿಂದ 500 ಮೀ ಅಂತರದೊಳಗಿರುವ ಪಂಪ್‍ಸೆಟ್ ಮಾಲಿಕರು ರೂ.10 ಸಾವಿರ ತುಂಬಿದವರಿಗೆ ಸಕ್ರಮ ಮಾಡುವ ಯೋಜನೆಯ ಲಾಭ ರೈತರಿಗೆ ದೊರೆಯಲಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲೆಯ ವಿದ್ಯುತ್ ಸರಬರಾಜು ಸ್ಥಿತಿಗತಿ ಕುರಿತು ಹೆಸ್ಕಾಂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಕ್ರಮ-ಸಕ್ರಮ ಪಂಪ್ ಸೆಟ್ ಯೋಜನೆಯಡಿ ಟ್ರಾನ್ಸಫಾರ್ಮರ್‍ನಿಂದ 500 ಮೀ ಅಂತರದೊಳಗಿರುವ ಪಂಪ್‍ಸೆಟ್ ಮಾಲಿಕರು ರೂ.10 ಸಾವಿರ ತುಂಬಿದವರಿಗೆ ಸಕ್ರಮ ಮಾಡುವ ಯೋಜನೆಯ ಲಾಭ ರೈತರಿಗೆ ದೊರೆಯಲಿದೆ. 500 ಮೀ ಅಂತರ ಮೇಲ್ಪಟವರಿಗೆ ಸೋಲಾರ ಅಳವಡಿಸಲಾಗುವುದು. ಜಿಲ್ಲೆಯಲ್ಲಿ ಸುಮಾರು 8 ರಿಂದ 10 ಸಾವಿರ ರೈತರು ಇದರ ಲಾಭ ಪಡೆಯಲಿದ್ದಾರೆಂದು ಸಚಿವರು ತಿಳಿಸಿದರು.
ಟ್ರಾನ್ಸಫಾರ್ಮರ್‍ಗಳು ಸುಟ್ಟಾಗ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳತಕ್ಕದ್ದು. ರೈತರು ಅಹವಾಲು ಸಲ್ಲಿಸಲು 1912 ಟೋಲ್ ಫ್ರೀ ದೂರವಾಣಿಗೆ ಬರುವ ಅಹವಾಲುಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಕ್ಷಣವೇ ಸ್ಪಂಧಿಸುವಂತೆ ತಿಳಿಸಿದರು. ಟ್ರಾನ್ಸಫಾರ್ಮರ್‍ಗಳು ಸುಟ್ಟ ತಕ್ಷಣವೇ ರೈತರೇ ಫೋನ್ ಮಾಡಿ ತಿಳಿಸುವುದಕ್ಕಿಂತ ಮುಂಚೆಯೇ ಹೆಸ್ಕಾಂ ಇಲಾಖೆಗೆ ನೇರವಾಗಿ ತಿಳಿಯುವಂತೆ ತಂತ್ರಜ್ಞಾನವನ್ನು ರೂಪಿಸುವಂತೆ ಸೂಚಿಸಿದರು.
ಆಧುನಿಕ ತಂತ್ರಜ್ಞಾನದ ಇಂದಿನ ಯುಗದಲ್ಲಿ ಹೆಸ್ಕಾಂ ಅಧಿಕಾರಿಗಳು ದಶಕಗಳ ಮುಂದಾಲೋಚನೆ ಇಟ್ಟುಕೊಂಡು ತಾಂತ್ರಿಕತೆಯನ್ನು ಬಳಸಬೇಕು. ವಿದ್ಯುತ್ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಪರಿಹರಿಸಲು ತಾಂತ್ರಿಕ ಸಿಬ್ಬಂದಿಗಳು 24*7 ಸಿದ್ದರಿರಬೇಕೆಂದು ಅವರು ಸೂಚಿಸಿದರು.