HomeLatest NewsBREAKING: ಉಪನ್ಯಾಸಕನನ್ನು ಕೊಂದು ಬಾವಿಗೆ ಎಸೆದಿದ್ದ ಕಿರಾತಕರು: ಮೂವರು ಹಂತಕರು ಅರೆಸ್ಟ್

BREAKING: ಉಪನ್ಯಾಸಕನನ್ನು ಕೊಂದು ಬಾವಿಗೆ ಎಸೆದಿದ್ದ ಕಿರಾತಕರು: ಮೂವರು ಹಂತಕರು ಅರೆಸ್ಟ್

ಚಿಕ್ಕಬಳ್ಳಾಪುರ: ವಿದೇಶದಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಉಪನ್ಯಾಸಕನನ್ನು ಬರ್ಬರವಾಗಿ ಹತ್ಯೆಗೈದಿದ್ದ ಹಂತಕರನ್ನು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮಾಂಜಿ ಹತ್ಯೆಯಾದ ಉಪನ್ಯಾಸಕ. ಆರೋಪಿಗಳು ರಾಮಾಂಜಿ ಬಳಿ ವಿದೇಶದಲ್ಲಿ ಉನ್ನತ ಹುದ್ದೆ ಕೊಡಿಸುತ್ತೇವೆ ಎಂದು 11 ಲಕ್ಷ ರೂಪಾಯಿ ಹಣ ಪಡೆದಿದ್ದರು. ಹೀಗೆ ಹಣವನ್ನು ಪಡೆದವರು ವಿದೇಶದಲ್ಲಿ ಯಾವ ಹುದ್ದೆಯನ್ನೂ ಕೊಡಿಸಿಲ್ಲ, ಹಣವನ್ನೂ ಹಿಂತಿರುಗಿಸಿಲ್ಲ. ಹಣ ವಾಪಸ್ ಕೇಳಿದ್ದಕ್ಕೆ ಉಪನ್ಯಾಸಕ ರಾಮಾಂಜಿಯನ್ನು ಬರ್ಬರವಾಗಿ ಹತ್ಯೆಗೈದು, ಬಳಿಕ ಶವವನ್ನು ಬಾವಿಗೆ ಎಸೆದು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular