ನವದೆಹಲಿ : ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಗಣರಾಜ್ಯೋತ್ಸವ ಹಿನ್ನೆಲೆ ಗುರುವಾರ ಭಾರತಕ್ಕೆ ಬಂದಿಳಿದರು. ಮ್ಯಾಕ್ರನ್ ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವುದರಿಂದ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ.
ಅವರು ವಿಶ್ವ ಪರಂಪರೆಯ ತಾಣವಾದ ಜಂತರ್ ಮಂತರ್ ಗೆ ತೆರಳಲಿದ್ದು, ಅಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ನಂತರ ಪ್ರಧಾನಮಂತ್ರಿಯವರೊಂದಿಗೆ ರೋಡ್ ಶೋ ನಡೆಸಲಿದ್ದಾರೆ.
ಜಂತರ್ ಮಂತರ್ ಸೇರಿದಂತೆ ಪಾರಂಪರಿಕ ತಾಣಗಳ ಪ್ರವಾಸ ಮತ್ತು ರೋಡ್ ಶೋನಲ್ಲಿ ಮ್ಯಾಕ್ರನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿಯಾಗಲಿದ್ದಾರೆ.