HomeEntertainmentರಕ್ಷಿತ್ ಶೆಟ್ಟಿ ಅಭಿನಯದ 'ರಿಕ್ಕಿ' ಸಿನಿಮಾ ತೆರೆ ಮೇಲೆ ಬಂದು ಇಂದಿಗೆ 8 ವರ್ಷ

ರಕ್ಷಿತ್ ಶೆಟ್ಟಿ ಅಭಿನಯದ ‘ರಿಕ್ಕಿ’ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ 8 ವರ್ಷ

ರಿಷಬ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ, ರಕ್ಷಿತ್ ಶೆಟ್ಟಿ ಅಭಿನಯದ ‘ರಿಕ್ಕಿ’ ಸಿನಿಮಾ 2016 ಜನವರಿ 22ರಂದು ರಾಜ್ಯದಾದ್ಯಂತ ತೆರೆಕಂಡಿತ್ತು. ಈ ಚಿತ್ರ ತೆರೆ ಮೇಲೆ ಬಂದು ಇಂದಿಗೆ ಎಂಟು ವರ್ಷಗಳಾಗಿದ್ದು, ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಎಸ್ ವಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಎಸ್ ವಿ ಬಾಬು ನಿರ್ಮಾಣ ಮಾಡಿದ್ದ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆ ಹರಿಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದು,  ಪ್ರಮೋದ್ ಶೆಟ್ಟಿ ಸೇರಿದಂತೆ ಅಚ್ಯುತ್ ಕುಮಾರ್, ಶಶಿಕಲಾ, ವೀಣಾ ಸುಂದರ್, ಸಾಧುಕೋಕಿಲ, ಮಂಜುನಾಥ್, ರಘು ಪಾಂಡೇಶ್ವರ್, ದಿನೇಶ್ ಮಂಗಳೂರು, ತೆರೆ ಹಂಚಿಕೊಂಡಿದ್ದಾರೆ. ಎಂ ಎಂ ವಿಶ್ವ ಸಂಕಲನ, ವೆಂಕಟೇಶ್ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಸಂಗೀತವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular