HomeKarnatakaBIG NEWS: ಬೀದಿ ದೀಪ ಸರಿಪಡಿಸಲು ಹೋಗಿ ದುರಂತ; ಕರೆಂಟ್ ಶಾಕ್ ಹೊಡೆದು ವ್ಯಕ್ತಿ ದುರ್ಮರಣ

BIG NEWS: ಬೀದಿ ದೀಪ ಸರಿಪಡಿಸಲು ಹೋಗಿ ದುರಂತ; ಕರೆಂಟ್ ಶಾಕ್ ಹೊಡೆದು ವ್ಯಕ್ತಿ ದುರ್ಮರಣ

ವಿಜಯನಗರ: ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸೂಚನೆಯಂತೆ ಬೀದಿ ದೀಪ ಸರಿಪಡಿಸಲೆಂದು ಕಂಬ ಹತ್ತಿದ್ದ ವ್ಯಕ್ತಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಒಡೆಯರಹಳ್ಳಿಯಲ್ಲಿ ನಡೆದಿದೆ.

ರೇಣುಕಪ್ಪ (37) ಮೃತ ದುರ್ದೈವಿ. ಬೀದಿ ದೀಪ ಸರಿಪಡಿಸಲು ಕರೆಂಟ್ ಕಂಬ ಹತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಸ್ಥಳದಲ್ಲೇ ರೇಣುಕಪ್ಪ ಸಾವನ್ನಪ್ಪಿದ್ದಾರೆ.

ಮೃತ ರೇಣುಕಪ್ಪ ಗ್ರಾಮದಲ್ಲಿ ಪಂಪ್ ಸೆಟ್ ಹಾಗೂ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ ರೇಣುಕಪ್ಪಗೆ ಬೀದಿ ದೀಪವನ್ನು ಸರಿಪಡಿಸಲು ಸೂಚಿಸಿದ್ದರು ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular