ಮಂಡ್ಯ: ಅಯೋಧ್ಯೆಯ ಶ್ರೀರಾಮ ಮಂತ್ರಾಕ್ಷತೆ ಪೂಜಿಸಲು ನಾಗಮಂಗಲ ತಾಲೂಕಿನ ಬಿಂಡಗನವಿಲೆ ಹೋಬಳಿಯ ನಾರಗೋನಹಳ್ಳಿಯ ಗವಿರಂಗನಾಥ ಸ್ವಾಮಿ ದೇವಾಲಯದಲ್ಲಿ ಮಾಂಸಾಹಾರ ನೈವೇದ್ಯ ಇಡುವ ವಾಡಿಕೆಯನ್ನು ಗ್ರಾಮಸ್ಥರು ಕೈಬಿಟ್ಟಿದ್ದಾರೆ.
ದೇವಾಲಯದಲ್ಲಿ ಸಂಕ್ರಾಂತಿ ಹಬ್ಬದ ಮಾರನೇ ದಿನ ದೇವರಿಗೆ ಮಾಂಸಾಹಾರ ನೈವೇದ್ಯ ಇಟ್ಟು ಸಂಬಂಧಿಕರು ಮತ್ತು ಸ್ನೇಹಿತರನ್ನು ಮನೆಗೆ ಊಟಕ್ಕೆ ಕರೆಯುವುದು ವಾಡಿಕೆಯಾಗಿದೆ. ಆದರೆ, ಅದೇ ಸಂದರ್ಭದಲ್ಲಿ ಗ್ರಾಮದ ಪ್ರತಿ ಮನೆಗೆ ಮಂತ್ರಾಕ್ಷತೆ ತಲುಪಿದ್ದರಿಂದ ಮಾಂಸಾಹಾರ ತ್ಯಜಿಸಿ ಮಂತ್ರಾಕ್ಷತೆ ಪೂಜಿಸಲಾಗುತ್ತಿದೆ.
ಅಯೋಧ್ಯೆ ರಾಮ ಮಂದಿರ ಶ್ರೀ ರಾಮಲಲ್ಲ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕೇಸರಿ ಧ್ವಜ ಬಂಟಿಂಗ್ಸ್ ಗಳನ್ನು ಹಾಕಲಾಗಿದೆ. ರ್ಯಾಲಿ ಕೂಡ ನಡೆಸಲಾಗಿದ್ದು, ಸಂಭ್ರಮ ಮನೆ ಮಾಡಿದೆ.