HomeIndiaBIG NEWS:‌ ಪ್ರಿಸ್ಕ್ರಿಪ್ಷನ್ ಇಲ್ಲದೆ ಆಂಟಿಬಯೋಟಿಕ್ ನೀಡುವಂತಿಲ್ಲ; ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

BIG NEWS:‌ ಪ್ರಿಸ್ಕ್ರಿಪ್ಷನ್ ಇಲ್ಲದೆ ಆಂಟಿಬಯೋಟಿಕ್ ನೀಡುವಂತಿಲ್ಲ; ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಭಾರತದಲ್ಲಿ ಆ್ಯಂಟಿಬಯೋಟಿಕ್ಸ್ ಅಥವಾ ಆ್ಯಂಟಿಮೈಕ್ರೊಬಿಯಲ್ ಔಷಧಗಳ ದುರುಪಯೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಔಷಧಿಗಳನ್ನು ಔಷಧಿ ಅಂಗಡಿಯಲ್ಲಿ ನೀವು ಹಾಗೆ ಖರೀದಿ ಮಾಡಲು ಸಾಧ್ಯವಿಲ್ಲ.  ವೈದ್ಯರ ಪ್ರಿಸ್ಕ್ರಿಪ್ಷನ್  ಇದ್ದಲ್ಲಿ ಮಾತ್ರ ಔಷಧಾಲಯಗಳು ಈ ಔಷಧಿಯನ್ನು ರೋಗಿಗೆ ಕೊಡಬಹುದು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದ ಘಟಕವಾಗಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ  ದೇಶದ ಎಲ್ಲಾ ವೈದ್ಯಕೀಯ ಕಾಲೇಜುಗಳು, ವೈದ್ಯಕೀಯ ಸಂಘಗಳು ಮತ್ತು ಫಾರ್ಮಾಸಿಸ್ಟ್ ಅಸೋಸಿಯೇಷನ್‌ಗಳ ವೈದ್ಯರಿಗೆ ಪತ್ರ ಬರೆದಿದೆ.

ವೈದ್ಯರು ಪ್ರಿಸ್ಕ್ರಿಪ್ಷನ್‌ ನಲ್ಲಿ ರೋಗಿಯಲ್ಲಿ ಕಂಡುಬರುವ ರೋಗಲಕ್ಷಣಗಳ ಬಗ್ಗೆ ನಿಖರವಾದ ಮಾಹಿತಿ ನೀಡಬೇಕು. ಯಾಕೆ ಆಂಟಿಬಯೋಟಿಕ್‌ ಔಷಧಿ ಶಿಫಾರಸ್ಸು ಮಾಡುತ್ತಿದ್ದೇವೆ ಎಂಬ ವಿವರ ಇರಬೇಕು. ಈ ಔಷಧಿಗಳನ್ನು ಮಿತಿಮೀರಿ ಬಳಕೆ ಮಾಡಲಾಗುತ್ತಿದ್ದು, ಅದನ್ನು ತಪ್ಪಿಸಲು ಈ ಕ್ರಮಕೈಗೊಳ್ಳಲಾಗಿದೆ. ಹಾಗಾಗಿಯೇ ವೈದ್ಯರು ಕಾರಣವನ್ನು ಹೇಳಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular