HomeLive Newsಇಂದು ತಮಿಳು ತಲೈವಾಸ್ ಮತ್ತು ಪಾಟ್ನಾ ಪೈರೇಟ್ಸ್ ಹಣಾಹಣಿ

ಇಂದು ತಮಿಳು ತಲೈವಾಸ್ ಮತ್ತು ಪಾಟ್ನಾ ಪೈರೇಟ್ಸ್ ಹಣಾಹಣಿ

ನಿನ್ನೆ ಪ್ರೊ ಕಬಡ್ಡಿಯ ಸಾವಿರದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಜೊತೆ ಬೆಂಗಾಲ್ ವಾರಿಯರ್ಸ್ ಭರ್ಜರಿ ಜಯ ಕಂಡಿದೆ, ಮಣಿಂದರ್ ಸಿಂಗ್ ಬೆಂಗಳೂರು ಬುಲ್ಸ್ ಎದರು ಮತ್ತೊಮ್ಮೆ ಹೆಬ್ಬುಲಿಯಂತೆ ಗರ್ಜಿಸಿದ್ದಾರೆ. ಈ ಪಂದ್ಯವನ್ನು ವೀಕ್ಷಿಸಲು ಹಲವಾರು ಕಬಡ್ಡಿಯ ದಿಗ್ಗಜರು ಆಗಮಿಸಿದ್ದರು.

ಜೈಪುರ್ ನಲ್ಲಿರುವ ಕಬಡ್ಡಿ ಪಂದ್ಯಗಳು ನಾಳೆಗೆ ಮುಕ್ತಾಯವಾಗಲಿದ್ದು ಇಂದು ತಮಿಳ್ ತಲೈವಾಸ್ ಮತ್ತು ಪಾಟ್ನಾ ಪೈರೇಟ್ಸ್ ಮುಖಾಮುಖಿಯಾಗಲಿವೆ.

ತಮಿಳ್ ತಲೈವಾಸ್ ತಂಡದಲ್ಲಿ ಸಾಯಿಲ್ ಗುಲಿಯ ಮತ್ತು ಸಾಗರ್ ಸಾಕಷ್ಟು ಟ್ಯಾಕಲ್ಸ್ ಪಾಯಿಂಟ್ಗಳನ್ನು ತಂದುಕೊಡುತ್ತಿದ್ದರೆ. ರೈಡರ್ ಗಳು ಎಡವುತ್ತಿದ್ದಾರೆ. ಹೀಗಾಗಿ ತಮಿಳ್ ತಲೈವಾಸ್ ತಂಡ ಸೋಲಿನ ಸರಪಳಿಯಲ್ಲೇ ಸಿಲುಕಿಕೊಂಡಿದೆ. ಇನ್ನು ಪಾಟ್ನಾ ಪೈರೇಟ್ಸ್ ತಂಡಕ್ಕೂ ಕೂಡ ಈ ಪಂದ್ಯದಲ್ಲಿ ಜಯ ಕಾಣುವುದು ತುಂಬಾ ಮುಖ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular