HomeBusinessಮೊಬೈಲ್ ಬಳಕೆದಾರರಿಗೆ ಶಾಕ್: 5ಜಿ ಅನ್ ಲಿಮಿಟೆಡ್ ಸೇವೆ ಬಂದ್, ಹೆಚ್ಚುವರಿ ಶುಲ್ಕ ಜಾರಿ ಶೀಘ್ರ

ಮೊಬೈಲ್ ಬಳಕೆದಾರರಿಗೆ ಶಾಕ್: 5ಜಿ ಅನ್ ಲಿಮಿಟೆಡ್ ಸೇವೆ ಬಂದ್, ಹೆಚ್ಚುವರಿ ಶುಲ್ಕ ಜಾರಿ ಶೀಘ್ರ

ನವದೆಹಲಿ: 5ಜಿ ಅನ್ ಲಿಮಿಟೆಡ್ ಶೀಘ್ರವೇ ಬಂದ್ ಆಗಲಿದ್ದು, ಶೇಕಡ 10ರಷ್ಟು ಶುಲ್ಕ ಹೆಚ್ಚಳಕ್ಕೆ ಟೆಲಿಕಾಂ ಕಂಪನಿಗಳು ಮುಂದಾಗಿವೆ.

ಟೆಲಿಕಾಂ ಕಂಪನಿಗಳಿಂದ 5ಜಿ ಮೊಬೈಲ್ ಹ್ಯಾಂಡ್ಸೆಟ್ ಹೊಂದಿರುವ ಬಳಕೆದಾರರಿಗೆ ನೀಡುತ್ತಿರುವ ಅನ್ ಲಿಮಿಟೆಡ್ ಸೇವೆಗಳು ರದ್ದಾಗಲಿವೆ. ಬದಲಿಗೆ 5ಜಿ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಪ್ರಸ್ತುತ ಜಿಯೋ, ಏರ್ಟೆಲ್ ಕಂಪನಿಗಳು ಗ್ರಾಹಕರಿಗೆ 4ಜಿ ದರದಲ್ಲಿ 5ಜಿ ಸೇವೆ ನೀಡುತ್ತಿವೆ. ಡೇಟಾ ಬಳಕೆಗೆ ದೈನಂದಿನ ಮಿತಿ ತೆಗೆದು ಹಾಕಿವೆ.

ಆದಾಯ ಮತ್ತು ಬಂಡವಾಳ ಸಂಗ್ರಹ ಹೆಚ್ಚಿಸಿಕೊಳ್ಳಲು ಏರ್ಟೆಲ್ ಮತ್ತು ಜಿಯೋ ಕಂಪನಿಗಳು ಈ ವರ್ಷದ ದ್ವಿತೀಯಾರ್ಧದಿಂದ ಬೆಲೆಯನ್ನು ಶೇ. 5-10 ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿವೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೂರ್ಣ ಪ್ರಮಾಣದಲ್ಲಿ 5ಜಿ ಸೇವೆ ಒದಗಿಸುತ್ತಿರುವ ಜಿಯೋ ಮತ್ತು ಏರ್ಟೆಲ್ ಕಂಪನಿ ಗಳು 12.5 ಕೋಟಿ ಬಳಕೆದಾರರನ್ನು ಹೊಂದಿವೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular