HomeEntertainmentನಟ ದರ್ಶನ್‌ಗೆ ಹೆಚ್ಚಾಯ್ತಾ ಹಿತ ಶತ್ರುಗಳ ಕಾಟ ? : ಭಾರಿ ವೈರಲ್ ಆಗುತ್ತಿದೆ ‘ಡಿ...

ನಟ ದರ್ಶನ್‌ಗೆ ಹೆಚ್ಚಾಯ್ತಾ ಹಿತ ಶತ್ರುಗಳ ಕಾಟ ? : ಭಾರಿ ವೈರಲ್ ಆಗುತ್ತಿದೆ ‘ಡಿ ಬಾಸ್’ ಟ್ವೀಟ್

ಬೆಂಗಳೂರು : ಕನ್ನಡ ಸಿನಿಮಾರಂಗದ ಸ್ಟಾರ್ ನಟ ದರ್ಶನ್ ಗೆ ಕನ್ನಡ ಚಿತ್ರರಂಗದಲ್ಲಿ ಭಾರಿ ದೊಡ್ಡ ಅಭಿಮಾನಿ ಬಳಗವಿದೆ. ಕೆಲವು ತಿಂಗಳುಗಳಿಂದ ನಟ ದರ್ಶನ್ ಹಲವು ವಿವಾದಕ್ಕೆ ಒಳಗಾಗಿದ್ದರು. ನಟ ದರ್ಶನ್ ಅವರನ್ನೇ ಕೆಲವರು ಟಾರ್ಗೆಟ್ ಮಾಡ್ತಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.

ನಾಯಿ ಕಚ್ಚಿದ ವಿವಾದ ಎದುರಿಸಿದ್ದ  ನಟ ದರ್ಶನ್ ಮತ್ತೆ ಪಬ್ ನಲ್ಲಿ ಪಾರ್ಟಿ ಮಾಡಿದ ವಿವಾದದಲ್ಲಿ ಸಿಲುಕಿ ಪೊಲೀಸ್ ಠಾಣೆ ಮೆಟ್ಟಿಲೇರಿ ಮತ್ತೆ ವಿಚಾರಣೆ ಎದುರಿಸಿದ್ದಾರೆ.    ನಿನ್ನೆಯಷ್ಟೇ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಟ ದರ್ಶನ್ ಅವರನ್ನು ಕೆಲವರು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದರು. ಹಲವು ವಿಷಯದಲ್ಲಿ ನಟ ದರ್ಶನ್ ಅವರನ್ನು ಸುಖಾ ಸುಮ್ಮನೆ ಎಳೆದು ತರಲಾಗುತ್ತಿದ್ಯಾ ಎಂಬ ವಿಚಾರ ಸದ್ಯ ಭಾರಿ ಚರ್ಚೆಗೆ ಕಾರಣವಾಗಿದೆ.

ನಟ ದರ್ಶನ್ ಅವರ ಯಶಸ್ಸನ್ನು ಸಹಿಸದೇ ಇರುವವರು ಬೇಕಂತ ಅವರನ್ನು ವಿವಾದಗಳಲ್ಲಿ ಎಳೆದು ತರುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಇದಕ್ಕೂ ಮುನ್ನ ನಟ ದರ್ಶನ್ ಮಾಡಿರುವ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.ಅವರ ಟ್ವೀಟ್ ನೋಡುತ್ತಿದ್ದರೆ ಷಡ್ಯಂತ್ರದ ಬಗ್ಗೆ ನಟ ದರ್ಶನ್ ಗೆ ಮೊದಲೇ ಗೊತ್ತಿತ್ತಾ ಎಂಬ ಪ್ರಶ್ನೆ ಮೂಡುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದರ್ಶನ್ ಟ್ವೀಟ್

ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ” ಎಂದು ಟ್ವೀಟ್ ಮಾಡಿದ್ದರು.

.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular