ಸಿಡ್ನಿ : ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಬಾಲಿವುಡ್ ನಟರಂತೆ ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.
ಹೌದು, ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಸ್ಸಿಜಿ) ನಲ್ಲಿ ಅಭಿಮಾನಿಗಳು ಹಿಂದೆಂದೂ ನೋಡಿರದ ರೀತಿಯಲ್ಲಿ ವರ್ತಿಸಿದರು. ಎಸ್ಸಿಜಿಯಲ್ಲಿ ಬಾಲಿವುಡ್ ನಟರಂತೆ ಡೇವಿಡ್ ವಾರ್ನರ್ ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Things you thought you'd never see on a cricket ground!
David Warner arrives at the BBL in a helicopter 🚁 pic.twitter.com/8529s5oBJh
— ESPNcricinfo (@ESPNcricinfo) January 12, 2024
ಸಿಡ್ನಿ ಸಿಕ್ಸರ್ಸ್ ವಿರುದ್ಧ ಸಿಡ್ನಿ ಥಂಡರ್ಸ್ ಪರ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಪಂದ್ಯದಲ್ಲಿ ಆಡಲು ಆಸ್ಟ್ರೇಲಿಯಾದ ಬ್ಯಾಟಿಂಗ್ ಸೂಪರ್ಸ್ಟಾರ್ ಹೆಲಿಕಾಪ್ಟರ್ ಮೂಲಕ ಎಸ್ಸಿಜಿಗೆ ಆಗಮಿಸಿದರು. ಹಂಟರ್ ವ್ಯಾಲಿಯಲ್ಲಿ ನಡೆದ ತಮ್ಮ ಸಹೋದರನ ಮದುವೆಯಿಂದ ನೇರವಾಗಿ ವಾರ್ನರ್ ಹೆಲಿಕಾಪ್ಟರ್ ಮೂಲಕ ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ.

